ನವದೆಹಲಿ (ಸೆ. 24): ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಭಾರೀ ದಂಡ ವಿಧಿಸುವ ಕಾಯ್ದೆಯನ್ನು ಇತ್ತೀಚೆಗೆ ಜಾರಿ ಮಾಡಿದ್ದ ಕೇಂದ್ರ ಸರ್ಕಾರ, ವಾಹನಗಳ ಮಾಲೀಕರಿಗೆ ಮತ್ತೊಂದು ಶಾಕ್‌ ನೀಡುವ ಸಾಧ್ಯತೆಯಿದೆ.

ಕಳೆದ 20 ವರ್ಷಗಳಲ್ಲೇ ಭಾರೀ ಪ್ರಮಾಣದ ಕುಸಿತದ ಹಾದಿಗೆ ಸಿಲುಕಿರುವ ಆಟೋಮೊಬೈಲ್‌ ವಲಯದ ಸುಧಾರಣೆ ಮತ್ತು ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ 15 ವರ್ಷಗಳಷ್ಟುಹಳೆಯ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರ ಪರೋಕ್ಷ ನಿಷೇಧ ಹೇರುವ ಸಾಧ್ಯತೆ ಇದೆ.

2 ಆ್ಯಪ್ ನಿಮ್ಮಲ್ಲಿದ್ದರೆ, ದುಬಾರಿ ದಂಡದಿಂದ ಬಚಾವ್!

ಹಳೆಯ ವಾಹನಗಳ ನಿಷೇಧ ಕುರಿತ ಹೊಸ ನೀತಿಯನ್ನು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಅಂತಿಮಗೊಳಿಸಿದ್ದು, ಅದರ ಜಾರಿಗೆ ಹಣಕಾಸು ಸಚಿವಾಲಯ ಮತ್ತು ಪ್ರಧಾನಿ ಕಾರ್ಯಾಲಯ ಕೂಡಾ ಸಮ್ಮತಿ ನೀಡಿದೆ ಎನ್ನಲಾಗಿದೆ. ಹೀಗಾಗಿ ಶೀಘ್ರವೇ ಇದನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಉದ್ದೇಶವನ್ನು ಸಾರಿಗೆ ಸಚಿವಾಲಯ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಏನಿದು ನೀತಿ?:

ಹಳೆಯ ವಾಹನಗಳು ರಸ್ತೆಗೆ ಇಳಿಯದಂತೆ ತಡೆಯುವ ನಿಟ್ಟಿನಲ್ಲಿ ಹೊಸ ನೀತಿ ಜಾರಿಗೆ ಸರ್ಕಾರ ನಿರ್ಧರಿಸಿದೆ. ಅದರನ್ವಯ 15 ವರ್ಷ ಹಳೆಯ ಪೆಟ್ರೋಲ್‌ ಮತ್ತು 10 ವರ್ಷ ಹಳೆಯ ಡೀಸೆಲ್‌ ವಾಹನಗಳನ್ನು ಮಾಲೀಕರು ಮರು ನೋಂದಣಿ ಮಾಡಿಸಬೇಕಾಗುತ್ತದೆ. ಹಾಲಿ ಇಂಥ ವಾಹನಗಳನ್ನು ಹೊಂದಿರುವ ಖಾಸಗಿ ವ್ಯಕ್ತಿಗಳು ಮರುನೋಂದಣಿಗೆ 600 ರು. ಶುಲ್ಕ ಪಾವತಿ ಮಾಡಿದರೆ ಸಾಕು. ಹೊಸ ನೀತಿ ಅನ್ವಯ ಈ ಶುಲ್ಕವನ್ನು 15000 ರು.ಗೆ ಹೆಚ್ಚಿಸಲಾಗುವುದು.

ಅದೇ ರೀತಿಯ ವಾಣಿಜ್ಯ ವಾಹನಗಳ ಮರುನೋಂದಣಿ ಶುಲ್ಕವನ್ನು 1000 ರು.ನಿಂದ 20000 ರು.ಗೆ ಹೆಚ್ಚಿಸಲಾಗುವುದು. ಮಧ್ಯಮ, ಭಾರೀ ಗಾತ್ರದ ವಾಣಿಜ್ಯ ವಾಹನಗಳ ಮರು ನೋಂದಣಿ ಶುಲ್ಕ 1500 ರು.ನಿಂದ 40000 ರು.ಗೆ ಹೆಚ್ಚಿಸಲಾಗುವುದು.

ಬೆಂಗಳೂರು: ನೋ ಪಾರ್ಕಿಂಗ್ ದಂಡ ಹಾಕಿದ ಸಿಟ್ಟಿಗೆ ಪೊಲೀಸಪ್ಪನ ವಸ್ತುಗಳನ್ನೇ ಕದ್ದ ಭೂಪ..!

ಹೊಸ ಖರೀದಿಗೆ ಆಫರ್‌?:

ಭಾರೀ ಮರುನೋಂದಣಿ ಶುಲ್ಕದ ಕಾರಣ, ಜನರ ಹಳೆಯ ವಾಹನಗಳನ್ನು ಬಳಕೆಗೆ ಹಿಂದೇಟು ಹಾಕುತ್ತಾರೆ. ಇಂಥ ವೇಳೆ ಹಳೆ ವಾಹನಗಳನ್ನು ಸರ್ಕಾರ ಸೂಚಿಸಿದ ಗುಜರಿಗೆ ಹಾಕಿದರೆ ಅಲ್ಲಿ ಪ್ರಮಾಣ ಪತ್ರ ನೀಡಲಾಗುತ್ತದೆ. ಇಂಥ ಪ್ರಮಾಣಪತ್ರವನ್ನು ಹೊಸ ವಾಹನಗಳ ಖರೀದಿಗೆ ಬಳಸಿದರೆ ಅಲ್ಲಿ ವಿವಿಧ ರೀತಿಯ ರಿಯಾಯಿತಿ ನೀಡಲಾಗುತ್ತದೆ ಎನ್ನಲಾಗಿದೆ.

ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಣಯದಿಂದ ಕತ್ತಲೆ ಸ್ಥಿತಿಯಲ್ಲಿರುವ ಆಟೋ ಮೊಬೈಲ್‌ ವಲಯದಲ್ಲಿ ಹೊಸ ಚೈತನ್ಯ ತುಂಬಲಿದೆ. ಅಲ್ಲದೆ, ಈ ವಲಯದಲ್ಲಿ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲಿದೆ ಎಂದು ಆಟೋಮೊಬೈಲ್‌ ವಲಯ ಆಶಾಭಾವನೆ ವ್ಯಕ್ತಪಡಿಸಿದೆ.

15 ವರ್ಷದ ಬಳಿಕ ವಾಹನಗಳ ಮರು-ನೋಂದಣಿ ಶುಲ್ಕವೂ ಭಾರೀ ಹೆಚ್ಚಳ?

ವಾಹನ ಮಾದರಿ ಮರುನೋಂದಣಿ ಶುಲ್ಕ (ಹಾಲಿ) ಪರಿಷ್ಕೃತ

ಖಾಸಗಿಯ 4 ಚಕ್ರ ವಾಹನ 600 ರು 15,000 ರು.

4 ಚಕ್ರದ ವಾಣಿಜ್ಯ ವಾಹನ 1000 ರು. 20,000ರು.

ಮಧ್ಯಮ, ಭಾರೀ ಸರಕು ಸಾಗಣೆ ವಾಹನ 1500 ರು. 40,000 ರು.