ಹಜ್‌ ಯಾತ್ರಿಕರಿಗೆ ಕೇಂದ್ರ ಸರ್ಕಾರ ಶಾಕ್ ಕೊಟ್ಟಿದೆ. ಹಜ್ ಯಾತ್ರೆಗೆ ಸಂಬಂಧಿಸಿದ ಕರಡು ನೀತಿ ಸಿದ್ಧವಾಗಿದೆ. ಯಾತ್ರಿಕರಿಗೆ ನೀಡುವ ಸಹಾಯಧವನ್ನು ರದ್ದುಪಡಿಸುವ ಪ್ರಸ್ತಾವನೆ ಮಾಡಲಾಗಿದೆ.
ನವದೆಹಲಿ (ಅ.09): ಹಜ್ ಯಾತ್ರಿಕರಿಗೆ ಕೇಂದ್ರ ಸರ್ಕಾರ ಶಾಕ್ ಕೊಟ್ಟಿದೆ. ಹಜ್ ಯಾತ್ರೆಗೆ ಸಂಬಂಧಿಸಿದ ಕರಡು ನೀತಿ ಸಿದ್ಧವಾಗಿದೆ. ಯಾತ್ರಿಕರಿಗೆ ನೀಡುವ ಸಹಾಯಧವನ್ನು ರದ್ದುಪಡಿಸುವ ಪ್ರಸ್ತಾವನೆ ಮಾಡಲಾಗಿದೆ.
ಹಜ್ ಸಹಾಯಧನ ರದ್ದತಿಯಿಂದ ಉಳಿಯುವ ಹಣ ಮುಸ್ಲಿಮರ ಶಿಕ್ಷಣಕ್ಕೆ ಬಳಕೆಯಾಗಲಿದೆ. ಜತೆಗೆ 45 ಕ್ಕಿಂತ ಹೆಚ್ಚು ವರ್ಷ ವಯಸ್ಸಾಗಿರುವ ಮಹಿಳೆಯರು, ಪುರುಷರ ಜತೆ ಇಲ್ಲದೆ ಕನಿಷ್ಠ 4 ಮಂದಿಯ ಗುಂಪಿನಲ್ಲಿ ಹೋಗುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರದ ಮಾಜಿ ಕಾರ್ಯದರ್ಶಿ ಅಫ್ಜಲ್ ಅಮಾನುಲ್ಲಾ ಅವರ ನೇತೃತ್ವದ ಸಮಿತಿಯು 2018-2022 ರ ಅವಧಿಯ ಹಜ್ ನೀತಿಯ ಕರಡನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. 2018ರ ಹಜ್ ಯಾತ್ರೆಯು ಹೊಸ ನೀತಿಗೆ ಅನುಗುಣವಾಗಿ ಇರುತ್ತದೆ. ಸಚಿವಾಲಯವು ಕರಡು ನೀತಿಯ ಪರಿಶೀಲನೆ ನಡೆಸಿದ ಬಳಿಕ ಸಂಬಂಧಪಟ್ಟ ಎಲ್ಲರ ಜತೆಯೂ ಚರ್ಚಿಸಲಾಗುವುದು ಎಂದು ಸಚಿವಾಲಯದ ಮೂಲಗಳು ಹೇಳಿವೆ.
