ಅಮುಲ್‌ ಕಂಪನಿಯಿಂದ ಕೆ.ಜಿ.ಗೆ 9720 ರು. ನಂತೆ ಮೊಸರು ಖರೀದಿಸಿರುವುದಾಗಿ ಮಧ್ಯ ರೈಲ್ವೆಯು ಆರ್‌ಟಿಐನಡಿ ಉತ್ತರ ನೀಡಿದೆ. ಅಂದರೆ 100 ಗ್ರಾಂಗೆ 972 ರುಪಾಯಿ. ಆದರೆ ಅಮುಲ್‌ ಕಂಪನಿಯ ವಿಶೇಷ ಮೊಸರಿಗೆ 100 ಗ್ರಾಂಗೆ ಕೇವಲ 25 ರು. ದರವಿದೆ!

ಮುಂಬೈ: 1 ಲೀಟರ್‌ ಮೊಸರಿಗೆ 40ರಿಂದ 45 ರು. ಆಗಬಹುದು. ಲೀಟರ್‌ ಖಾದ್ಯ ತೈಲಕ್ಕೆ ಹೆಚ್ಚೆಂದರೆ 90 ರು. ಆಗಬಹುದು. ಆದರೆ ಮಧ್ಯ ರೈಲ್ವೆಯು ತನ್ನ ಉಗ್ರಾಣಗಳಿಗೆ 100 ಗ್ರಾಂ ಮೊಸರಿಗೆ 972 ರು. ಹಾಗೂ ಲೀಟರ್‌ ರೀಫೈನ್ಡ್ ತೈಲಕ್ಕೆ 1241 ರು. ಪಾವತಿಸಿರುವ ವಿಚಾರ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಬೆಳಕಿಗೆ ಬಂದಿದ್ದು, ನಾಗರಿಕರನ್ನು ಚಕಿತಗೊಳಿಸಿದೆ.

ಅಮುಲ್‌ ಕಂಪನಿಯಿಂದ ಕೆ.ಜಿ.ಗೆ 9720 ರು. ನಂತೆ ಮೊಸರು ಖರೀದಿಸಿರುವುದಾಗಿ ಮಧ್ಯ ರೈಲ್ವೆಯು ಆರ್‌ಟಿಐನಡಿ ಉತ್ತರ ನೀಡಿದೆ. ಅಂದರೆ 100 ಗ್ರಾಂಗೆ 972 ರುಪಾಯಿ. ಆದರೆ ಅಮುಲ್‌ ಕಂಪನಿಯ ವಿಶೇಷ ಮೊಸರಿಗೆ 100 ಗ್ರಾಂಗೆ ಕೇವಲ 25 ರು. ದರವಿದೆ!

58 ಲೀಟರ್‌ ರೀಫೈನ್ಡ್ ಎಣ್ಣೆಯನ್ನು 72,034 ರು.ಗೆ ಖರೀದಿಸಿರುವುದಾಗಿ ರೈಲ್ವೆ ಲೆಕ್ಕ ಕೊಟ್ಟಿದೆ. ಇದರರ್ಥ ಒಂದು ಲೀಟರ್‌ ಖಾದ್ಯ ತೈಲಕ್ಕೆ 1241 ರು. ಪಾವತಿಸಿದಂತೆ ಆಗಿದೆ. ಮಾರುಕಟ್ಟೆಯಲ್ಲಿ ಕೆ.ಜಿ.ಗೆ 15 ರು.ನಂತೆ ಲಭ್ಯವಿರುವ ಉಪ್ಪನ್ನು ಪ್ರತಿ ಪ್ಯಾಕೆಟ್‌ಗೆ 49 ರು.ನಂತೆ ಖರೀದಿಸಲಾಗಿದೆ.

ತಂಪು ಪಾನೀಯಗಳಿಗೆ ಪ್ರತಿ ಬಾಟಲ್‌ಗೆ 49 ರು. ಭರಿಸಲಾಗಿದೆ. ರೈಲ್ವೆಯ ಕ್ಯಾಟರಿಂಗ್‌ ವಿಭಾಗ ಅತ್ಯಂತ ನಷ್ಟದಲ್ಲಿದೆ ಎಂಬುದನ್ನು ತಿಳಿದ ಅಜಯ್‌ ಬೋಸ್‌ ಎಂಬುವರು ಆರ್‌ಟಿಐನಡಿ ಅರ್ಜಿ ಸಲ್ಲಿಸಿದಾಗ ಈ ಭ್ರಷ್ಟಾಚಾರ ಬೆಳಕಿಗೆ ಬಂದಿದೆ. ಆರಂಭದಲ್ಲಿ ಈ ಕುರಿತು ಮಾಹಿತಿ ನೀಡಲು ರೈಲ್ವೆ ನಿರಾಕರಿಸಿತ್ತು. ಬೋಸ್‌ ಅವರು ಮೇಲ್ಮನವಿ ಸಲ್ಲಿಸಿದ್ದರು. ಆದರೂ ಉತ್ತರ ಬರಲಿಲ್ಲ. ಎರಡನೇ ಬಾರಿ ಸಲ್ಲಿಸಿದಾಗ ಉತ್ತರ ಸಿಕ್ಕಿದೆ.