ಕೇಂದ್ರ ಸಚಿವ ಅನಂತ್ ಕುಮಾರ್ ಹೆದರೋದು ಈ ಇಬ್ಬರಿಗೆ ಮಾತ್ರವಂತೆ!

First Published 11, Feb 2018, 12:32 PM IST
Central Minister Ananth Kumar Slams Rahul Gandhi
Highlights

ನಾನು ಹೆದರೋದು ಇಬ್ಬರಿಗೆ ಮಾತ್ರ ಒಂದು ಮಾಧ್ಯಮ, ಮತ್ತೊಂದು ನನ್ನ ಹೆಂಡತಿ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹಾಸ್ಯ ಚಟಾಕಿ ಹಾರಿಸಿದರು. 

ಬೆಂಗಳೂರು (ಫೆ.11): ನಾನು ಹೆದರೋದು ಇಬ್ಬರಿಗೆ ಮಾತ್ರ ಒಂದು ಮಾಧ್ಯಮ, ಮತ್ತೊಂದು ನನ್ನ ಹೆಂಡತಿ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹಾಸ್ಯ ಚಟಾಕಿ ಹಾರಿಸಿದರು. 

ಮಾಧ್ಯಮದ ಕಣ್ಣು ತಪ್ಪಿಸಿ ಏನೂ ಮಾಡಲು ಸಾದ್ಯವಿಲ್ಲ.  ರಾಹುಲ್ ಒಮ್ಮೆ ಉತ್ತರಾಖಂಡಗೆ ಹೋಗಿದ್ರು. ಮಾಧ್ಯಮದ ಕಣ್ಣಿಗೆ ಬಿದ್ದಿದ್ರು.  ಎಲ್ಲಿ ಹೋಗಿದ್ರಿ ಅಂದಾಗ ಧ್ಯಾನ ಮಾಡಲಿಕ್ಕೆ ಥಾಯ್’ಲೆಂಡಿಗೆ ಹೋಗಿದ್ದೆ ಅಂದ್ರು.  ಆಗ ಮಾಧ್ಯಮದವರು ನಾವೂ ಥಾಯ್’ಲೆಂಡಿಗೆ ಹೋಗಿದ್ದೆವು. ಆದರೆ ಧ್ಯಾನ ಮಾಡಲಿಕ್ಕೆ ಹೋಗಿದ್ದಾಗ ನಿಮ್ಮನ್ನು ಮಾತ್ರ ನೋಡುತ್ತಿದ್ದೇವೆ  ಅಂದ್ರು.  ಈ ರೀತಿ ಮಾಧ್ಯಮದ ಕಣ್ಣು ತಪ್ಪಿಸಿ, ಸುಳ್ಳು ಹೇಳಿಕೊಂಡು ತಿರುಗೋದು ಕಾಂಗ್ರೆಸ್ ಜಾಯಮಾನ.  ಬಿಜೆಪಿಯಲ್ಲಿ ಎಲ್ಲವೂ ಪಾರದರ್ಶಕವಾಗಿರುತ್ತದೆ.  ಪತ್ರಿಕಾ ಸ್ವಾತಂತ್ರ್ಯ ಕ್ಕೆ ಬೇಲಿ ಹಾಕಿದ್ದು ಕಾಂಗ್ರೆಸ್  ಎಂದು ಕೇಂದ್ರ ಸಚಿವ ಅನಂತಕುಮಾರ್ ವಾಗ್ದಾಳಿ ನಡೆಸಿದರು. 
 

loader