Asianet Suvarna News Asianet Suvarna News

ಕಾವೇರಿ: ಇಂದಿನ ಕೇಂದ್ರದ ಮಧ್ಯಸ್ಥಿಕೆ ಸಭೆಯಲ್ಲಿ ಏನಾಗಬಹುದು?

central govt to mediate in cauvery issue

ನವದೆಹಲಿ(ಸೆ. 29): ಸುಪ್ರೀಂಕೋರ್ಟ್​ ಸೂಚನೆಯಂತೆ ಕೇಂದ್ರ ಸರ್ಕಾರ ಕಾವೇರಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿದೆ. ಇಂದು ರಾಜಧಾನಿಯಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವ ಉಮಾಭಾರತಿ ಕರೆದಿರುವ ಉಭಯ ರಾಜ್ಯಗಳ ಮುಖ್ಯಮಂತ್ರಿ ಸಭೆ ಬೆಳಗ್ಗೆ 11:30ಕ್ಕೆ ಆರಂಭಗೊಳ್ಳಲಿದೆ. ಸಿಎಂ ಸಿದ್ದರಾಮಯ್ಯ, ನೀರಾವರಿ ಸಚಿವ ಎಂ.ಬಿ.ಪಾಟೀಲ್ ಇಂದು ಬೆಳಗ್ಗೆ ಗಂಟೆಗೆ ಡೆಲ್ಲಿಯತ್ತ ಆಗಮಿಸಿದ್ದಾರೆ. ಇನ್ನೊಂದೆಡೆ, ಅನಾರೋಗ್ಯದ ಕಾರಣ ತಮಿಳುನಾಡು ಸಿಎಂ ಜಯಲಲಿತಾ ಈ ಹೈವೋಲ್ಟೇಜ್ ಮೀಟಿಂಗ್'ನ್ನು ಅಟೆಂಡ್ ಮಾಡುತ್ತಿಲ್ಲ. ಬದಲಾಗಿ ಹಾಲಿ ಲೋಕೋಪಯೋಗಿ ಸಚಿವ ಪಳನಿಸ್ವಾ ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

ಬಿಜೆಪಿ ಗಂಭೀರ:
ಇನ್ನೊಂದು ಕಡೆ ಬಿಜೆಪಿ ನಿಯೋಗ ಕೂಡ ದಿಲ್ಲಿಯಲ್ಲಿ ಬೀಡುಬಿಟ್ಟು ಸಮಸ್ಯೆ ಬಗೆಹರಿಸಲು ಹೆಣಗಾಡುತ್ತಿದೆ. ಎರಡೂ ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸುವಂತೆ ಸೂಚಿಸಿರುವುದಾಗಿ ಬಿಎಸ್ ಯಡಿಯೂರಪ್ಪ ಹೇಳುತ್ತಿದ್ದಾರೆ. ಈ ಕಾರಣಕ್ಕೆ ಬಿಜೆಪಿ ಕೂಡ ಕಾವೇರಿ ವಿಚಾರದ ಗಂಭೀರತೆಯನ್ನು ಅರ್ಥ ಮಾಡಿಕೊಂಡಿದೆ. ಒಂದು ವೇಳೆ, ಉಭಯ ರಾಜ್ಯಗಳಿಗೂ ತಜ್ಞರ ಸಮಿತಿ ಕಳುಹಿಸಿ ವಸ್ತುಸ್ಥಿತಿ ಅಧ್ಯಯನಕ್ಕೆ ಕೇಂದ್ರ ಸರ್ಕಾರ ಸೂಚಿಸಿದರೆ ಕರ್ನಾಟಕದ ಪಾಲಿಗೆ ನಿಜಕ್ಕೂ ಗಂಡಾತರದಿಂದ ಪಾರಾದ ಸಂಭ್ರಮವೇ ಸರಿ.

ಇಂದು ಏನಾಗಬಹುದು?
- ಕರ್ನಾಟಕ ಕೋರ್ಟ್ ಆದೇಶ ಪಾಲಿಸಿಲ್ಲವೆಂದು ತಮಿಳುನಾಡು ಸಭೆ ಬಹಿಷ್ಕರಿಸಬಹುದು
- ಕೇಂದ್ರ ವ್ಯತಿರಿಕ್ತ ಆದೇಶ ಕೊಟ್ಟಲ್ಲಿ ಯಾವುದಾದರೂ  ಒಂದು ರಾಜ್ಯ ತೀರ್ಮಾನವನ್ನು ಒಪ್ಪದಿರಬಹುದು
- ಎರಡೂ ರಾಜ್ಯಗಳು ಸಭೆಯ ತೀರ್ಮಾನವನ್ನು ವಿರೋಧಿಸಬಹುದು
- ಎರಡು ರಾಜ್ಯಗಳ ನಡುವೆ ಸಮ್ಮತಿ ಸಾಧ್ಯವಿಲ್ಲವೆಂದು ಇಂದೇ ತೀರ್ಮಾನ ಪ್ರಕಟಿಸದಿರಬಹುದು
- ಎರಡು ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನವನ್ನು ಸುಪ್ರೀಂಕೋರ್ಟ್'​ನಲ್ಲೇ ಹೇಳಬಹುದು
- ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳಿಗೂ ಅಧ್ಯಯನ‌ ತಂಡ ಕಳಿಸಬಹುದು

ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಸಭೆಯಲ್ಲಿ ತೆಗೆದುಕೊಳ್ಳುವ ಯಾವುದೇ ತೀರ್ಮಾನವನ್ನೂ ತಮಿಳ್ನಾಡು ಸರ್ಕಾರ ಒಪ್ಪದಿರುವ ಸಂಭವವೇ ಜಾಸ್ತಿ ಇದೆ ಎಂದು ಹೇಳಲಾಗುತ್ತಿದೆ. ನಾಳೆ ಸುಪ್ರೀಂಕೋರ್ಟ್'​ನ ದ್ವಿಸದಸ್ಯ ಪೀಠದ ಮುಂದೆಯೇ ವಿಚಾರಣೆ ನಡೆಯಲಿದೆ. ಶುಕ್ರವಾರದ ಈ ವಿಚಾರಣೆ ಕೂಡ ತೀವ್ರ ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ, ಕಾವೇರಿ ವಿವಾದದ ಚೆಂಡು ಕೇಂದ್ರ ಸರ್ಕಾರದ ಅಂಗಳದಲ್ಲಿದ್ದು ಏನಾಗುತ್ತೆ ಅನ್ನೋದು ಇವತ್ತು ಮಧ್ಯಾಹ್ನ ಅಥವಾ ಸಂಜೆ ಹೊತ್ತಿಗೆ ಸ್ಪಷ್ಟವಾಗಲಿದೆ.

ಬ್ಯೂರೋ ರಿಪೋರ್ಟ್, ಸುವರ್ಣ ನ್ಯೂಸ್​

Follow Us:
Download App:
  • android
  • ios