ಟಿಡಿಪಿಗೆ ಶಾಕ್‌ಗೆ ಮಣಿದ ಕೇಂದ್ರ: ಆಂಧ್ರಕ್ಕೆ 1269 ಕೋಟಿ ಅನುದಾನ

First Published 11, Feb 2018, 10:15 AM IST
Central Govt to announce Special package for Andhra
Highlights

ಟಿಡಿಪಿ ಆಕ್ರೋಶದ ನಡುವೆಯೇ ಕಳೆದೊಂದು ವಾರದ ಅವಧಿಯಲ್ಲಿ ಆಂಧ್ರದ ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರ 1269 ಕೋಟಿ ರು. ಬಿಡುಗಡೆ ಮಾಡಿದೆ.

ನವದೆಹಲಿ: ಆಂಧ್ರಪ್ರದೇಶ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಯಾವುದೇ ಮಾನ್ಯತೆ ನೀಡಲಾಗಿಲ್ಲ. ನಮ್ಮನ್ನ ಮಲತಾಯಿ ಮಕ್ಕಳ ರೀತಿ ನೋಡಲಾಗುತ್ತಿದೆ ಎಂದು ಆರೋಪಿಸಿ ಕಳೆದೊಂದು ವಾರದಿಂದ ಸಂಸತ್ತಿನಲ್ಲಿ ಭಾರೀ ಗದ್ದಲ ಎಬ್ಬಿಸಿದ್ದ ಮತ್ತು ಅಗತ್ಯ ಬಿದ್ದರೆ ಬಿಜೆಪಿ ಮೈತ್ರಿಗೆ ಗುಡ್‌ಬೈ ಹೇಳುವುದಾಗಿ ಟಿಡಿಪಿ ನೀಡಿದ ಎಚ್ಚರಿಕೆಗೆ ಬಿಜೆಪಿ ಮಣಿದಂತೆ ಕಾಣುತ್ತದೆ.

 ಟಿಡಿಪಿ ಆಕ್ರೋಶದ ನಡುವೆಯೇ ಕಳೆದೊಂದು ವಾರದ ಅವಧಿಯಲ್ಲಿ ಆಂಧ್ರದ ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರ 1269 ಕೋಟಿ ರು. ಬಿಡುಗಡೆ ಮಾಡಿದೆ. ಈ ಪೈಕಿ ಬಿಜೆಪಿ ಮತ್ತು ಟಿಡಿಪಿ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದ್ದ ಪೊಲ್ಲಾವರಂ ಯೋಜನೆಗಾಗಿನ 417 ಕೋಟಿ ರು. ಹಣ ಕೂಡಾ ಸೇರಿದೆ.

loader