ಟೆಲಿಕಾಂ ಸಂಸ್ಥೆಗಳ ನಿಯಂತ್ರಣಕ್ಕೆ ರೂಪಿಸಿರುವ ಕಾಯ್ದೆಯಂತೆ ಶೀಘ್ರದಲ್ಲಿಯೇ ಓವರ್-ದ-ಟಾಪ್ ಸೇವೆ ನೀಡುತ್ತಿರುವ ಫೇಸ್‌ಬುಕ್, ವಾಟ್ಸಪ್, ಸ್ಕೈಪ್, ವಿಚಾಟ್ ಮತ್ತು ಗೂಗಲ್ ಟಾಕ್ ಮುಂತಾದ ಆ್ಯಪ್‌‌ಗಳ ನಿಯಂತ್ರಣಕ್ಕೂ ಕಾಯಿದೆ ರೂಪಿಸುವುದಾಗಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಬೆಂಗಳೂರು (ಏ.06): ಟೆಲಿಕಾಂ ಸಂಸ್ಥೆಗಳ ನಿಯಂತ್ರಣಕ್ಕೆ ರೂಪಿಸಿರುವ ಕಾಯ್ದೆಯಂತೆ ಶೀಘ್ರದಲ್ಲಿಯೇ ಓವರ್-ದ-ಟಾಪ್ ಸೇವೆ ನೀಡುತ್ತಿರುವ ಫೇಸ್‌ಬುಕ್, ವಾಟ್ಸಪ್, ಸ್ಕೈಪ್, ವಿಚಾಟ್ ಮತ್ತು ಗೂಗಲ್ ಟಾಕ್ ಮುಂತಾದ ಆ್ಯಪ್‌‌ಗಳ ನಿಯಂತ್ರಣಕ್ಕೂ ಕಾಯಿದೆ ರೂಪಿಸುವುದಾಗಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಟಿಟಿ ಸೇವೆ ನೀಡುತ್ತಿರುವ ಆ್ಯಪ್‌‌ಗಳು ಟೆಲಿಕಾಂ ನೆಟ್ವರ್ಕ್ ಬಳಸಿಕೊಂಡೆ ಗ್ರಾಹಕರನ್ನು ಸೆಳೆಯುತ್ತಿವೆ. ಆದರೆ, ಅವುಗಳ ನಿಯಂತ್ರಣಕ್ಕೆ ಯಾವುದೇ ಅಧಿಕೃತ ಕಾನೂನು ರೂಪಿಸಿಲ್ಲ ಎಂದು ಟೆಲಿಕಾಂ ಸಂಸ್ಥೆಗಳು ವಾದಿಸುತ್ತಿವೆ. ಹೀಗಾಗಿ ಇಂಥ ಆ್ಯಪ್‌‌ಗಳ ನಿಯಂತ್ರಣಕ್ಕೆ ಕಾನೂನು ರೂಪಿಸಲು ಕೇಂದ್ರ ಸರಕಾರ ಮುಂದಾಗಿದೆ. ವಾಟ್ಸಪ್ ಗೌಪ್ಯವಾಗಿಡಬೇಕಾದ ಬಳಕೆದಾರರ ಮಾಹಿತಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳಲು ಫೇಸ್‌ಬುಕ್‌ಗೆ ಒದಗಿಸಲು ಮುಂದಾಗಿರುವುದು ಕಾನೂನು ಬಾಹಿರ ಎಂದು ಕರ್ಮಣ್ಯ ಸಿಂಗ್ ಸರೀನ್ ಹಾಗೂ ಶ್ರೇಯಾ ಸೇಥಿ ಅವರು ಸರ್ವೋಚ್ಚ ನ್ಯಾಯಾಲಯದ ಮೇಟ್ಟಿಲೇರಿದ್ದರು. ಇದನ್ನು ಪ್ರಶ್ನಿಸಿ ವಾಟ್ಸಪ್ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿತ್ತು. ಈ ಮೇಲ್ಮನವಿ ಆಧಾರದಲ್ಲಿ ಸುಪ್ರೀಂ ಕೋರ್ಟಿನ ಸೂಚನೆಯಂತೆ ಕೇಂದ್ರವು ಈ ಮಾಹಿತಿಯನ್ನು ಸುಪ್ರೀಂ ಕೋರ್ಟಿಗೆ ತಿಳಿಸಿದೆ.

ಸುಪ್ರೀಂಕೋರ್ಟಿನಲ್ಲಿ ಈ ಕುರಿತು ಏಪ್ರಿಲ್ 18ರಂದು ಮುಂದಿನ ವಿಚಾರಣೆ ನಡೆಯಲಿದೆ.