ಅಂಗವಿಕಲರ ಪೋಷಿಸುವ ಕುಟುಂಬಕ್ಕೆ ಮೋದಿ ಸರ್ಕಾರದಿಂದ ತೆರಿಗೆ ವಿನಾಯ್ತಿ..?

First Published 14, Jan 2018, 10:26 AM IST
Central Govt May Anounce New Scheme
Highlights

2014ರ ಲೋಕಸಭೆ ಚುನಾವಣೆಯ ಪ್ರಣಾಳಿಕೆ ವೇಳೆ ನೀಡಲಾದ ಬಾಕಿ ಭರವಸೆಗಳನ್ನು ಈಡೇರಿಸಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ.

ನವದೆಹಲಿ: 2014ರ ಲೋಕಸಭೆ ಚುನಾವಣೆಯ ಪ್ರಣಾಳಿಕೆ ವೇಳೆ ನೀಡಲಾದ ಬಾಕಿ ಭರವಸೆಗಳನ್ನು ಈಡೇರಿಸಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ. ಅದಕ್ಕೆಂದೇ ಇನ್ನು 20 ದಿನದಲ್ಲಿ ಮಂಡನೆಯಾಗಲಿರುವ ಮುಂಗಡಪತ್ರದಲ್ಲಿ ಬಾಕಿ ಉಳಿದಿರುವ ಭರವಸೆಗಳು ಈಡೇರುವ ನಿರೀಕ್ಷೆಯಿದೆ.

ಯಾವ ಭರವಸೆಗಳು ಈಡೇರದೇ ಬಾಕಿ ಉಳಿದಿವೆ ಎಂಬುದರ ಪಟ್ಟಿಯನ್ನು ಸಿದ್ಧಪಡಿಸಲು ಪ್ರಧಾನಮಂತ್ರಿಗಳು ಎಲ್ಲ ಸಚಿವಾಲಯಗಳಿಗೆ ಸೂಚಿಸಿದ್ದಾರೆ. ಈ ಪ್ರಕಾರ, ಅಂಗವಿಕಲರನ್ನು ಪೋಷಿಸುವ ಕುಟುಂಬಗಳಿಗೆ ಹೆಚ್ಚಿನ ತೆರಿಗೆ ವಿನಾಯ್ತಿ ನೀಡುವ ಭರವಸೆಯನ್ನು 2014ರಲ್ಲಿ ಬಿಜೆಪಿ ನೀಡಿತ್ತು.

ಈಗ ಈ ಬೇಡಿಕೆಯನ್ನು ಈಡೇರಿಸಬೇಕು. ಮುಂಗಡ ಪತ್ರದಲ್ಲಿ ಇದನ್ನು ಘೋಷಣೆ ಮಾಡಬೇಕು ಎಂದು ಸಾಮಾ ಜಿಕ ನ್ಯಾಯ ಸಚಿವಾಲಯವು ವಿತ್ತ ಸಚಿವಾಲಯಕ್ಕೆ ಮನವಿ ಸಲ್ಲಿಸಿದೆ. ಈಗ ಆದಾಯ ತೆರಿಗೆ ಇಲಾಖೆಯು ಅಂಗವಿಕಲರನ್ನು ನೋಡಿ ಕೊಳ್ಳುವ ಕುಟುಂಬಕ್ಕೆ ಕೆಲ ಮಟ್ಟಿನ ತೆರಿಗೆ ವಿನಾಯ್ತಿ ನೀಡುತ್ತದೆ.

loader