ಈಗಾಗಲೇ ವಿವಿಧ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರ ಇಳಿಕೆ ಮೂಲಕ ಸಣ್ಣ ಉಳಿತಾಯ ಖಾತೆದಾರರಿಗೆ ಶಾಕ್ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಇದೇ ವರ್ಗಕ್ಕೆ ಮತ್ತೊಂದು ಶಾಕ್ ನೀಡಿದೆ.
ನವದೆಹಲಿ: ಈಗಾಗಲೇ ವಿವಿಧ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರ ಇಳಿಕೆ ಮೂಲಕ ಸಣ್ಣ ಉಳಿತಾಯ ಖಾತೆದಾರರಿಗೆ ಶಾಕ್ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಇದೇ ವರ್ಗಕ್ಕೆ ಮತ್ತೊಂದು ಶಾಕ್ ನೀಡಿದೆ.
ಸಣ್ಣ ಹೂಡಿಕೆದಾರರಿಗೆ ಹೆಚ್ಚಿನ ಬಡ್ಡಿ ದರ ನೀಡುವ ಏಕೈಕ ಮಾರ್ಗವಾಗಿದ್ದ ಶೇ.8ರಷ್ಟು ಬಡ್ಡಿದರದ ಭಾರತೀಯ ಸರ್ಕಾರ ಉಳಿತಾಯ (ತೆರಿಗೆಗೊಳಪಟ್ಟ) ಬಾಂಡ್, 2013 ರ ಮೇಲಿನ ಹೂಡಿಕೆಯನ್ನು 2018 ರ ಜ.2ರಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸುತ್ತಿರುವುದಾಗಿ ಪ್ರಕಟಿಸಿದೆ. ಇದು ಇತರೆ ಹೂಡಿಕೆಗಳಲ್ಲಿ ಬಡ್ಡಿ ಕಡಿತಗೊಂಡ ಬಳಿಕ, ಹೆಚ್ಚಿನ ಬಡ್ಡಿಗೆ ಈ ಯೋಜನೆಯನ್ನು ನಂಬಿಕೊಂಡಿದ್ದವರಿಗೆ ಆಘಾತ ತಂದಿದೆ.
