ಮೋದಿ ಸರ್ಕಾರವು ಅಡುಗೆ ಅನಿಲ ಸಬ್ಸಿಡಿ ಪಟ್ಟಿಯನ್ನು ಮತ್ತಷ್ಟು ಕಡಿತಗೊಳಿಸುವ ಯೋಚನೆಯಲ್ಲಿದೆ. ಯಾರು ಕಾರು ಹೊಂದಿದ್ದಾರೋ ಅವರಿಗೆ  ಎಲ್ಪಿಜಿ ಸಬ್ಸಿಡಿ ಕಡಿತಗೊಳಿಸುವ ಚಿಂತನೆಯನ್ನು ಸರ್ಕಾರ ಆರಂಭಿಸಿದೆ ಎಂದು ಮೂಲಗಳು ಹೇಳಿವೆ.

ನವದೆಹಲಿ (ಡಿ.8): ಮೋದಿ ಸರ್ಕಾರವು ಅಡುಗೆ ಅನಿಲ ಸಬ್ಸಿಡಿ ಪಟ್ಟಿಯನ್ನು ಮತ್ತಷ್ಟು ಕಡಿತಗೊಳಿಸುವ ಯೋಚನೆಯಲ್ಲಿದೆ. ಯಾರು ಕಾರು ಹೊಂದಿದ್ದಾರೋ ಅವರಿಗೆ ಎಲ್ಪಿಜಿ ಸಬ್ಸಿಡಿ ಕಡಿತಗೊಳಿಸುವ ಚಿಂತನೆಯನ್ನು ಸರ್ಕಾರ ಆರಂಭಿಸಿದೆ ಎಂದು ಮೂಲಗಳು ಹೇಳಿವೆ. ಈ ಚಿಂತನೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ.

ಈಗ ಕೆಲವು ಜಿಲ್ಲೆಗಳಿಂದ ಪ್ರಾದೇಶಿಕ ಸಾರಿಗೆ ಕಚೇರಿಗಳಿಂದ (ಆರ್’ಟಿಒ) ಸರ್ಕಾರ ಕಾರು ನೋಂದಣಿ ವಿವರಗಳನ್ನು ತರಿಸಿಕೊಂಡಿದೆ. ಇದು ಸಾಕಾರಗೊಂಡರೆ ಸರ್ಕಾರದ ಬೊಕ್ಕಸಕ್ಕೆ ಇನ್ನಷ್ಟು ಉಳಿತಾಯವಾಗಲಿದೆ ಎನ್ನಲಾಗಿದೆ.