ಇನ್ಮುಂದೆ ಅಂದರೆ ಡಿಸೆಂಬರ್ 30ರವರೆಗೆ  ರದ್ದಾಗಿರುವ ಹಳೇ ನೂಟಗಳನ್ನ 5 ಸಾವಿರಕ್ಕಿಂತ ಹೆಚ್ಚುವರಿಯಾಗಿ ಒಮ್ಮೆ ಮಾತ್ರ ಡೆಪಾಸಿಟ್ ಮಾಡಬಹುದು.  

ನವದೆಹಲಿ(ಡಿ.19): ಕಪ್ಪು ಹಣವನ್ನ ತಡೆಯಲು ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದೆ. ಈಗಾಗಲೇ, ನಿಷೇಧವಾಗಿರುವ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನೊಳಗೊಂಡ 5000 ರೂ. ಗೂ ಹೆಚ್ಚಿನ ಹಣವನ್ನ ಡಿಸೆಂಬರ್ 30ರವರೆಗೆ ಒಂದು ಬಾರಿ ಮಾತ್ರ ಅಕೌಂಟಿಗೆ ಡೆಪಾಸಿಟ್ ಮಾಡಬಹುದು. 5 ಸಾವಿರದವರೆಗಿನ ಡೆಪಾಸಿಟ್`ಗೆ ಯಾವುದೇ ನಿರ್ಬಂಧವಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ರದ್ದಾಗಿರುವ ಭಾರೀ ಪ್ರಮಾಣದ ನೋಟುಗಳನ್ನು ಬ್ಯಾಂಕ್‌ ಖಾತೆ ಬಳಸಿಕೊಂಡು ಹೊಸ ನೋಟುಗಳಿಗೆ ಪರಿವರ್ತಿಸುವ ವ್ಯಾಪಕ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಈ ಹೊಸ ನಿರ್ಬಂಧವನ್ನು ವಿಧಿಸಿದೆ.

ಹೀಗಾಗಿ, ಇನ್ಮುಂದೆ ಅಂದರೆ ಡಿಸೆಂಬರ್ 30ರವರೆಗೆ ರದ್ದಾಗಿರುವ ಹಳೇ ನೂಟಗಳನ್ನ 5 ಸಾವಿರಕ್ಕಿಂತ ಹೆಚ್ಚುವರಿಯಾಗಿ ಒಮ್ಮೆ ಮಾತ್ರ ಡೆಪಾಸಿಟ್ ಮಾಡಬಹುದು.