500, 1000 ರೂ. ನೋಟು ಚಲಾವಣೆ ರದ್ದು ಹಿನ್ನೆಲೆಯಲ್ಲಿ ಹಳೆ ನೋಟುಗಳ ಚಲಾವಣೆಗೆ ವಿಧಿಸಿದ್ದ ನಿರ್ಬಂಧವನ್ನ ಕೇಂದ್ರಸರ್ಕಾರ ಸಡಿಲಗೊಳಿಸಿದೆ. ಸರ್ಕಾರಿ ಸ್ವಾಮ್ಯದ ಆಸ್ಪತ್ರೆ, ಪೆಟ್ರೋಲ್​ ಬಂಕ್, ಔಷಧ, ಸಾರಿಗೆ ವ್ಯವಸ್ಥೆ, ವಿಮಾನ ಬುಕ್ಕಿಂಗ್​, ರೈಲ್ವೆ, ಟೋಲ್​​ಗಳಲ್ಲಿ ಹಳೆ ನೋಟು ಬಳಕೆಗೆ ಅನುಮತಿ ನೀಡಿದೆ. ಮತ್ತೆ ಮೂರು ದಿನಗಳ ಕಾಲ ಹಳೆ ನೋಟು ವಹಿವಾಟು ವಿಸ್ತರಣೆ ಮಾಡಲಾಗಿದೆ.

ನವದಹಲಿ(ನ.11): 500, 1000 ರೂ. ನೋಟು ಚಲಾವಣೆ ರದ್ದು ಹಿನ್ನೆಲೆಯಲ್ಲಿ ಹಳೆ ನೋಟುಗಳ ಚಲಾವಣೆಗೆ ವಿಧಿಸಿದ್ದ ನಿರ್ಬಂಧವನ್ನ ಕೇಂದ್ರಸರ್ಕಾರ ಸಡಿಲಗೊಳಿಸಿದೆ. ಸರ್ಕಾರಿ ಸ್ವಾಮ್ಯದ ಆಸ್ಪತ್ರೆ, ಪೆಟ್ರೋಲ್​ ಬಂಕ್, ಔಷಧ, ಸಾರಿಗೆ ವ್ಯವಸ್ಥೆ, ವಿಮಾನ ಬುಕ್ಕಿಂಗ್​, ರೈಲ್ವೆ, ಟೋಲ್​​ಗಳಲ್ಲಿ ಹಳೆ ನೋಟು ಬಳಕೆಗೆ ಅನುಮತಿ ನೀಡಿದೆ. ಮತ್ತೆ ಮೂರು ದಿನಗಳ ಕಾಲ ಹಳೆ ನೋಟು ವಹಿವಾಟು ವಿಸ್ತರಣೆ ಮಾಡಲಾಗಿದೆ.

ವಿದ್ಯುತ್​, ಜಲಮಂಡಳಿ ಬಿಲ್​ ಪಾವತಿಗೂ ಹಳೆ ನೋಟು ಬಳಕೆಗೆ ಅನುಮತಿ ನೀಡಲಾಗಿದೆ.