ಕಠಿಣ ಬಜೆಟ್ ಸುಳಿವು ನೀಡಿದ ಪ್ರಧಾನಿ ಮೋದಿ

First Published 22, Jan 2018, 9:47 AM IST
Central Budget 2018 news
Highlights

ನನ್ನ ಬಜೆಟ್ ಚುನಾವಣಾ ಪ್ರಣೀತವಾಗಿರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ‘ಟೈಮ್ಸ್ ನೌ’ ಆಂಗ್ಲ ಸುದ್ದಿವಾಹಿನಿಗೆ ಸಂದರ್ಶನ ನೀಡಿದ ಅವರು ಬಜೆಟ್’ನಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಅದನ್ನು ಬಿಟ್ಟು ಚುನಾವಣಾ ಪ್ರಣೀತವಾಗಿ ಹಾಗೂ ಜನಪ್ರಿಯತೆಗೆಂದು ಬಜೆಟ್ ಮಂಡಿಸಲಾಗದು ಎಂದು ಹೇಳಿದರು.

ನವದೆಹಲಿ: ನನ್ನ ಬಜೆಟ್ ಚುನಾವಣಾ ಪ್ರಣೀತವಾಗಿರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ‘ಟೈಮ್ಸ್ ನೌ’ ಆಂಗ್ಲ ಸುದ್ದಿವಾಹಿನಿಗೆ ಸಂದರ್ಶನ ನೀಡಿದ ಅವರು ಬಜೆಟ್’ನಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಅದನ್ನು ಬಿಟ್ಟು ಚುನಾವಣಾ ಪ್ರಣೀತವಾಗಿ ಹಾಗೂ ಜನಪ್ರಿಯತೆಗೆಂದು ಬಜೆಟ್ ಮಂಡಿಸಲಾಗದು ಎಂದು ಹೇಳಿದರು.

ದೇಶವು ಹಿಂದುಳಿದ 5 ದೇಶಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿತ್ತು. ಇಂಥ ದೇಶವನ್ನು ಈಗ ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯಲಾಗುತ್ತಿದೆ. ಜನ ಸಾಮಾನ್ಯರು ಬರೀ ಪುಕ್ಕಟೆ ಹಾಗೂ ಜನಪ್ರಿಯ ಕೊಡುಗೆ ಬಯಸುತ್ತಾರೆ ಎಂಬುದು ಭ್ರಮೆ. ಅವರಿಗೆ ಪ್ರಾಮಾಣಿಕತೆ ಬೇಕು ಎಂದು ಅಭಿಪ್ರಾಯ ಪಟ್ಟರು. ಆದರೆ ಕೃಷಿ ಕ್ಷೇತ್ರ ಹಿಂದುಳಿದಿದೆ ಎಂದು ಒಪ್ಪಿದ ಅವರು, ಕೇಂದ್ರ ಹಾಗೂ ರಾಜ್ಯಗಳು ಈ ದಿಸೆ ಯಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸಬೇಕೆಂದರು.

loader