ಬೆಳೆ ಸಾಲ ಕೇಳ ಬಂದ ರೈತನ ಪತ್ನಿಗೆ ಪಲ್ಲಂಗಕ್ಕೆ ಆಹ್ವಾನಿಸಿದ ಮ್ಯಾನೇಜರ್‌!

Central Bank of India official demands sexual favours from farmer's wife to clear loan
Highlights

 ಬೆಳೆ ಸಾಲ ಕೋರಿ ಬ್ಯಾಂಕ್‌ಗೆ ಬಂದ ರೈತನ ಪತ್ನಿಯೊಬ್ಬರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲು ಭಾರತೀಯ ಸೆಂಟ್ರಲ್‌ ಬ್ಯಾಂಕ್‌ನ ವ್ಯವಸ್ಥಾಪಕರೊಬ್ಬರು ಯತ್ನಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಬುಲ್ಧಾನಾ ಜಿಲ್ಲೆಯಲ್ಲಿರುವ ಸೆಂಟ್ರಲ್‌ ಬ್ಯಾಂಕ್‌ನ ಶಾಖೆಯ ಮ್ಯಾನೇಜರ್‌ ವಿರುದ್ಧ ಶುಕ್ರವಾರ ದೂರು ದಾಖಲಾಗಿದೆ.

ಮುಂಬೈ: ಬೆಳೆ ಸಾಲ ಕೋರಿ ಬ್ಯಾಂಕ್‌ಗೆ ಬಂದ ರೈತನ ಪತ್ನಿಯೊಬ್ಬರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲು ಭಾರತೀಯ ಸೆಂಟ್ರಲ್‌ ಬ್ಯಾಂಕ್‌ನ ವ್ಯವಸ್ಥಾಪಕರೊಬ್ಬರು ಯತ್ನಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಬುಲ್ಧಾನಾ ಜಿಲ್ಲೆಯಲ್ಲಿರುವ ಸೆಂಟ್ರಲ್‌ ಬ್ಯಾಂಕ್‌ನ ಶಾಖೆಯ ಮ್ಯಾನೇಜರ್‌ ವಿರುದ್ಧ ಶುಕ್ರವಾರ ದೂರು ದಾಖಲಾಗಿದೆ.

ಅಲ್ಲದೆ, ತನ್ನ ಆಸೆಯನ್ನು ಪೂರೈಸುವುದಾದರೆ, ವಿಶೇಷ ಪ್ಯಾಕೇಜ್‌ನಡಿ ಬೆಳೆ ಸಾಲ ನೀಡಲಾಗುವುದು ಎಂದು ಮ್ಯಾನೇಜರ್‌ ತನ್ನ ಆಪ್ತ ಸಹಾಯಕನ ಕೈಯಲ್ಲಿ ಮಹಿಳೆಗೆ ಹೇಳಿ ಕಳಿಸಿದ್ದ ಎಂದು ರೈತ ಮತ್ತು ರೈತನ ಪತ್ನಿ ದೂರಿದ್ದಾರೆ. ಹೀಗಾಗಿ, ಬ್ಯಾಂಕ್‌ ಮ್ಯಾನೇಜರ್‌ ಮತ್ತು ಆತನ ಆಪ್ತ ಸಹಾಯಕನ ವಿರುದ್ಧವೂ ದೂರು ದಾಖಲಿಸಿಕೊಳ್ಳಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೈತ ಮತ್ತು ಆತನ ಪತ್ನಿ ಗುರುವಾರ ಮಲಕಾಪುರ ತಾಲೂಕಿನಲ್ಲಿರುವ ಬ್ಯಾಂಕ್‌ಗೆ ಭೇಟಿ ನೀಡಿ ಬೆಳೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಸಾಲ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಲು ಬ್ಯಾಂಕ್‌ ವ್ಯವಸ್ಥಾಪಕ ರೈತನ ಪತ್ನಿಯ ಖಾಸಗಿ ಮೊಬೈಲ್‌ ನಂಬರ್‌ ಅನ್ನು ಪಡೆದುಕೊಂಡಿದ್ದರು. ಬೆಳೆ ಸಾಲ ಕುರಿತು ಮಾತನಾಡಲು ಮಹಿಳೆಗೆ ಕರೆ ಮಾಡಿದ ಆರೋಪಿಯಾದ ಬ್ಯಾಂಕ್‌ ವ್ಯವಸ್ಥಾಪಕ ರಾಜೇಶ್‌ ಹಿವಾಸೆ, ಅಸಭ್ಯವಾಗಿ ಮಾತನಾಡಿದ್ದಾನೆ. ಅಲ್ಲದೆ, ಸಾಲ ನೀಡಬೇಕಾದರೆ, ತನ್ನ ಲೈಂಗಿಕ ತೃಷೆ ತೀರಿಸಬೇಕು ಎಂದು ಆಗ್ರಹಿಸಿದ್ದ ಎಂದು ಹೇಳಲಾಗಿದೆ.

loader