ಕೇಂದ್ರೀಯ ತನಿಖಾ ದಳ ಹಾಗೂ ಜಾರಿ ನಿರ್ದೇಶನಾಲಯ  6 ಮಹಿಳೆಯರು ಒಳಗೊಂಡ 28 ಸುಸ್ತಿದಾರರ ವಿರುದ್ಧ 2015 ರಲ್ಲೇ ಕ್ರಿಮಿನಲ್ ಪ್ರಕರಣ ಒಳಗೊಂಡಂತೆ ಆರ್ಥಿಕ ಅಪರಾಧದ ಪ್ರಕರಣಗಳನ್ನು ದಾಖಲಿಸಿದೆ.

ನವದೆಹಲಿ[ಆ.04]: ಲಕ್ಷಾಂತರ ಕೋಟಿ ರೂ. ವಂಚಿಸಿ ದೇಶದಿಂದ ಪರಾರಿಯಾದ 28 ಆರ್ಥಿಕ ಅಪರಾಧಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಕೇಂದ್ರೀಯ ತನಿಖಾ ದಳ ಹಾಗೂ ಜಾರಿ ನಿರ್ದೇಶನಾಲಯ 6 ಮಹಿಳೆಯರು ಒಳಗೊಂಡ 28 ಅಪರಾಧಿಗಳ ವಿರುದ್ಧ 2015 ರಲ್ಲೇ ಕ್ರಿಮಿನಲ್ ಪ್ರಕರಣ ಒಳಗೊಂಡಂತೆ ಆರ್ಥಿಕ ಅಪರಾಧದ ಪ್ರಕರಣಗಳನ್ನು ದಾಖಲಿಸಿದೆ.

ಕೇಂದ್ರ ರಾಜ್ಯ ವಿದೇಶಾಂಗ ಸಚಿವ ಜನರಲ್ ವಿ.ಕೆ.ಸಿಂಗ್[ನಿವೃತ್ತ] ಇವರ ಹೆಸರುಗಳನ್ನು ಜು.25, 2018ರಂದು ಲೋಕಸಭೆಗೆ ಸಲ್ಲಿಸಿದರು. ಸಂಸದ ಪ್ರೊ. ಕೆ.ವಿ.ಥಾಮಸ್ ಅವರ ಪ್ರಶ್ನೆಗೆ ಉತ್ತರಿಸಿದ ವಿ.ಕೆ.ಸಿಂಗ್ ತಲೆ ಮರೆಸಿಕೊಂಡಿರುವ ಆರ್ಥಿಕ ಅಪರಾಧಿಗಳನ್ನು ಭಾರತಕ್ಕೆ ಕರೆತರಲು ಲುಕ್ ಔಟ್ ನೋಟಿಸ್, ರೆಡ್ ಕಾರ್ನ್'ರ್ ನೋಟಿಸ್ ಸೇರಿದಂತೆ ಹಲವು ಕ್ರಮಗಳನ್ನು ಜರುಗಿಸಲಾಗಿದೆ ಎಂದು ತಿಳಿಸಿದರು.

ಅಪರಾಧಿಗಳನ್ನು ಭಾರತಕ್ಕೆ ಒಪ್ಪಿಸಲು ಸಲುವಾಗಿಯೇ ಭಾರತವು ಅಮೆರಿಕಾ,ಯುಎಇ, ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಹಾಂಕಾಂಗ್ ಸೇರಿದಂತೆ 48 ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಆರ್ಥಿಕ ಸುಸ್ತಿದಾರರ ಪಟ್ಟಿ

  • ಪುಷ್ಪೇಶ್ ಬೇಯ್ಡ್
  • ಅಶೀಶ್ ಜೋಬ್ನಾ ಪುತ್ರ
  • ವಿಜಯ್ ಮಲ್ಯ
  • ಸನ್ನಿ ಕಾಲ್ರಾ
  • ಸಂಜಯ್ ಕಾಲ್ರಾ
  • ಸುಧೀರ್ ಕುಮಾರ್ ಕಾರ್ಲಾ
  • ಆರತಿ ಕಾರ್ಲಾ
  • ವರ್ಷ ಕಾರ್ಲಾ
  • ಜಿತಿನ್ ಮೆಹ್ತಾ
  • ಉಮೇಶ್ ಪರೇಖ್
  • ಕಮಲೇಶ್ ಪರೇಖ್
  • ನಿಲೇಶ್ ಪರೇಖ್
  • ಏಕಲವ್ಯ ಗಾರ್ಗ್
  • ವಿನಯ್ ಮಿಟ್ಟಲ್
  • ಚೇತನ್ ಜಯಂತಿ ಲಾಲ್ ಸಂದೇಸರಾ
  • ನಿತಿನ್ ಜಯಂತಿ ಲಾಲ್ ಸಂದೇಸರಾ
  • ದೀಪ್ತಿ ಬೆನ್ ಚೇತನ್ ಕುಮಾರ್ ಸಂದೇಸರಾ
  • ನೀರವ್ ಮೋದಿ
  • ನಿಶಾಲ್ ಮೋದಿ
  • ಮೆಹುಲ್ ಚೋಕ್ಸಿ
  • ಸಬ್ಯಾ ಸೇಟ್
  • ರಾಜೀವ್ ಗೋಯಲ್
  • ಅಲ್ಕಾ ಗೋಯಲ್ 
  • ಲಲಿತ್ ಮೋದಿ
  • ರಿತೀಶ್ ಜೈನ್
  • ಹಿತೇಶ್ ನರೇಂದ್ರ ಬಾಯ್ ಪಟೇಲ್
  • ಮಯೂರಿ ಬೆನ್ ಪಟೇಲ್
  • ಪ್ರೀತಿ ಅಶೀಶ್ ಜೊಬನ್ ಪುತ್ರ