ಸರ್ ಎಂ ವಿಶ್ವೇಶ್ವರಯ್ಯ ಹುಟ್ಟುಹಬ್ಬವಾದ ಇಂಜಿನಿಯರ್ಸ್ ಡೇ ಗೆ ದಿಗ್ಗಜರು ಶುಭ ಕೋರಿದ್ದು ಹೀಗೆ...
ಬೆಂಗಳೂರು(ಸೆ.15): ಇಂದು ದೇಶದಾದ್ಯಂತ ಇಂಜಿನಿಯರ್ಸ್ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಭಾರತ ದೇಶ ಕಂಡ ಚಾಣಾಕ್ಷ ಇಂಜಿನಿಯರ್, ಹೆಮ್ಮೆಯ ಕನ್ನಡಿಗ, ಭಾರತ ರತ್ನ ಪ್ರಶಸ್ತಿ ವಿಜೇತ ಮೋಕ್ಷಂಗುಂಡಂ ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬವನ್ನು ಇಂಜಿನಿಯರ್ಸ್ ಸಮುದಾಯ 'ಇಂಜಿನಿಯರ್ಸ್ ದಿನವಾಗಿ' ಸಡಗರ ಆಚರಿಸುತ್ತಿದ್ದಾರೆ.
"ಕೈಗಾರಿಕೀಕರಣ ಹೊಂದಿ ಇಲ್ಲವೇ ನಾಶವಾಗಿ" ಎಂದು ದೇಶಕ್ಕೆ ಕರೆಕೊಟ್ಟ ಸರ್.ಎಂವಿ, ಭಾರತ ಕಂಡ ಶ್ರೇಷ್ಠ ಸಿವಿಲ್ ಇಂಜಿನಿಯರ್, ಆಣೆಕಟ್ಟು ನಿರ್ಮಾತೃ, ಅರ್ಥಶಾಸ್ತ್ರಜ್ಞ, ದಿವಾನರಾಗಿ ಗುರುತಿಸಿಕೊಂಡಿದ್ದರು, ಮಾತ್ರವಲ್ಲದೇ ದೇಶ ಕಟ್ಟುವ ನಿಟ್ಟಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.
ಸರ್ ಎಂ ವಿಶ್ವೇಶ್ವರಯ್ಯ ಹುಟ್ಟುಹಬ್ಬವಾದ ಇಂಜಿನಿಯರ್ಸ್ ಡೇ ಗೆ ದಿಗ್ಗಜರು ಶುಭ ಕೋರಿದ್ದು ಹೀಗೆ...
