ಸ್ವಾತಂತ್ರ್ಯ ನಂತರ ದೇಶದಲ್ಲಿ ಜಾರಿಗೆ ತಂದ ಅತೀ ದೊಡ್ಡ ತೆರಿಗೆ ಸುಧಾರಣೆ ಎಂಬ ಬಣ್ಣನೆಗೆ ಪಾತ್ರವಾಗಿರುವ ಜಿಎಸ್‌ಟಿ ವ್ಯವಸ್ಥೆಗೆ ಮಧ್ಯ ರಾತ್ರಿ ಚಾಲನೆ ದೊರೆತಿದೆ. ಈ ಹಿನ್ನೆಲೆ ದೇಶದ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸುವುದರ ಮೂಲಕ ಸಂಭ್ರಮಿಸಿದರು. ಈ ಕುರಿತು ಒಂದು ವರದಿ ಇಲ್ಲಿದೆ.
ನವದೆಹಲಿ(ಜು.01): ಸ್ವಾತಂತ್ರ್ಯ ನಂತರ ದೇಶದಲ್ಲಿ ಜಾರಿಗೆ ತಂದ ಅತೀ ದೊಡ್ಡ ತೆರಿಗೆ ಸುಧಾರಣೆ ಎಂಬ ಬಣ್ಣನೆಗೆ ಪಾತ್ರವಾಗಿರುವ ಜಿಎಸ್ಟಿ ವ್ಯವಸ್ಥೆಗೆ ಮಧ್ಯ ರಾತ್ರಿ ಚಾಲನೆ ದೊರೆತಿದೆ. ಈ ಹಿನ್ನೆಲೆ ದೇಶದ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸುವುದರ ಮೂಲಕ ಸಂಭ್ರಮಿಸಿದರು. ಈ ಕುರಿತು ಒಂದು ವರದಿ ಇಲ್ಲಿದೆ.
ಆರ್ಥಿಕ ಮಹಾಕ್ರಾಂತಿ ಜಾರಿಗೆ ತರುವ ಮೂಲಕ ಒಂದು ರಾಷ್ಟ್ರ, ಒಂದು ತೆರಿಗೆ ಪರಿಕಲ್ಪನೆಯ ಯುಗಾರಂಭವಾಗಿದೆ. ಈ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಉಪ ರಾಷ್ಟ್ರಪತಿ ಅಮಿದ್ ಅನ್ಸಾರಿ ಸೇರಿದಂತೆ ಗಣ್ಯರು, ಭಾರತೀಯರು ಸಾಕ್ಷಿಯಾದರು. ಐತಿಹಾಸಿಕ ಕ್ಷಣಕ್ಕಾಗಿ ಸಂಸತ್ ಭವನ ವಿದ್ಯುತ್ ದೀಪಗಳಿಂದ ಕಂಗೊಳಿಸಿದ್ದು ವಿಶೇಷವಾಗಿತ್ತು.
ಇನ್ನು ಏಕ ರೂಪ ಏಕ ತೆರಿಗೆ ಜಾರಿಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸುವುದರ ಮೂಲಕ ಸಂಭ್ರಮಿಸಿದರು. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಸಂಸತ್ ಭವನ, ಇಂಡಿಯಾ ಗೇಟ್ ಸೇರಿದಂತೆ ಬಿಜೆಪಿ ಕಚೇರಿ ಎದುರು ಕಾರ್ಯಕರ್ತರು ಕುಣಿದು ಕುಪ್ಪಳಿಸುವ ಮೂಲಕ ಜಿಎಸ್ಟಿ ಸ್ವಾಗತಿಸಿದರು.
ಇತ್ತ ಉತ್ತರ ಪ್ರದೇಶದ ವಾರಣಾಸಿಯಲ್ಲೂ ಕೂಡ ವಾಣಿಜ್ಯೋದ್ಯಮಿಗಳು ಮೆರವಣಿಗೆ ಮಾಡುವ ಮೂಲಕ ಜಿಎಸ್ಟಿಗೆ ಬೆಂಬಲ ಸೂಚಿಸಿದರು. ಭೂಪಾಲ್'ನಲ್ಲೂ ಕೂಡ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿತ್ತು. ಮೋದಿ ಪರ ಘೋಷಣೆ ಕೂಗೋದ್ರ ಮೂಲಕ ಜಿಎಸ್ಟಿ ಸ್ವಾಗತಿಸಿದರು
ಒಟ್ಟಿನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ವಲ್ಡ್ಕಪ್ ಗೆದ್ದಿದ್ದಕ್ಕಿಂತ ಹೆಚ್ಚು ಸಂಭ್ರಮ ಪ್ರಧಾನಿ ಮೋದಿ ಜಿಎಸ್ಟಿ ಜಾರಿಗೆ ತಂದ ಕ್ಷಣದಲ್ಲಿ ಕಂಡಿತು.
