ಎಸ್ಎಂಎಸ್ ರವಾನೆಗೆ ಭಾನುವಾರ 25 ವರ್ಷ ತುಂಬಿತು. 25 ವರ್ಷಗಳ ಹಿಂದೆ, ಅಂದರೆ, 1992ರ ಡಿ.3ರಂದು ನೀಲ್ ಪಾಪ್ವಥರ್ ಎಂಬ ಇಂಜಿನಿಯರ್ ಕಂಪ್ಯೂಟರ್ ಮೂಲಕ ಮೊದಲ ಸಂದೇಶ ರವಾನೆ ಮಾಡಿದ್ದರು.
ನ್ಯೂಯಾರ್ಕ್(ಡಿ.4): ಮೊಬೈಲ್ ಬಳಕೆದಾರರ ಅವಿಭಾಜ್ಯ ಅಂಗವಾದ ಎಸ್ಎಂಎಸ್ ರವಾನೆಗೆ ಭಾನುವಾರ 25 ವರ್ಷ ತುಂಬಿತು. 25 ವರ್ಷಗಳ ಹಿಂದೆ, ಅಂದರೆ, 1992ರ ಡಿ.3ರಂದು ನೀಲ್ ಪಾಪ್ವಥರ್ ಎಂಬ ಇಂಜಿನಿಯರ್ ಕಂಪ್ಯೂಟರ್ ಮೂಲಕ ಮೊದಲ ಸಂದೇಶ ರವಾನೆ ಮಾಡಿದ್ದರು.
ವೋಡಾ-ಫೋನ್ ಸಂಸ್ಥೆಯಲ್ಲಿ ಸಣ್ಣ ಸಂದೇಶ ಸೇವೆ ಅಭಿವೃದ್ಧಿಗಾಗಿ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನೀಲ್ ಪಾಪ್ವಥರ್ ತಮ್ಮ ಸಹೋದ್ಯೋಗಿ ರಿಚರ್ಡ್ ಜಾವರ್ಸ್ ಅವರಿಗೆ `ಮೇರಿ ಕ್ರಿಸ್ಮಸ್' ಎಂಬ ಸಂದೇಶ ರವಾನಿಸಿದ್ದರು.
ಇದಾದ ಒಂದು ವರ್ಷದ ಬಳಿಕ ನೋಕಿಯಾ ಸಂಸ್ಥೆ ಸಂದೇಶ ಸ್ವೀಕರಿಸುವ `ಬೀಪ್' ಸೌಂಡ್ ಬರುವ ಸಲಕರಣೆಯನ್ನು ಬಿಡುಗಡೆ ಮಾಡಿತ್ತು. ಈವೇಳೆ 160 ಪದಗಳನ್ನೊಳಗೊಂಡ ಸಂದೇಶವನ್ನು ಮಾತ್ರ ರವಾನಿಸಬಹುದಾಗಿತ್ತು.
