ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಸ್ಥಾನಕ್ಕೆ ಅರವಿಂದ್‌ ಸುಬ್ರಮಣಿಯನ್‌ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ಅವರು ಟೀಕಾ ಪ್ರಹಾರ ನಡೆಸಿದ್ದಾರೆ. 

ನವದೆಹಲಿ: ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಸ್ಥಾನಕ್ಕೆ ಅರವಿಂದ್‌ ಸುಬ್ರಮಣಿಯನ್‌ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ಅವರು ಟೀಕಾ ಪ್ರಹಾರ ನಡೆಸಿದ್ದಾರೆ. ಈ ಬಗ್ಗೆ ಬುಧವಾರ ಮಾತನಾಡಿದ ರಾಹುಲ್‌, ಮುಳುಗುತ್ತಿರುವ ಆರ್ಥಿಕತೆ ಎಂಬ ಹಡಗನ್ನು ಆರ್‌ಎಸ್‌ಎಸ್‌ ನಿರ್ವಹಿಸುತ್ತಿರುವುದರಿಂದ ಬೇಸತ್ತಿರುವ ಪ್ರತಿಭಾವಂತರು ದೇಶದಿಂದ ಹೊರಗೆ ಹೋಗುತ್ತಿದ್ದಾರೆ, ಎಂದು ಹೇಳಿದ್ದಾರೆ.

ಅಲ್ಲದೆ, ಸುಬ್ರಮಣಿಯನ್‌ ರಾಜೀನಾಮೆ ಬಗ್ಗೆ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದ ಜೇಟ್ಲಿ ಬಗ್ಗೆ ವ್ಯಂಗ್ಯಭರಿತವಾಗಿ ಟ್ವೀಟ್‌ ಮಾಡಿರುವ ರಾಹುಲ್‌, ಬೀಗ ಹಾಕಿಕೊಂಡಿರುವ ಕೋಣೆಯಲ್ಲಿರುವ

ಮಾಜಿ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು ಫೇಸ್‌ಬುಕ್‌ನಲ್ಲಿ ಬ್ರೇಕಿಂಗ್‌ ನ್ಯೂಸ್‌ ಕೊಡುತ್ತಿದ್ದಾರೆ. ಬಿಜೆಪಿ ಖಜಾಂಚಿಯಾದ ಪಿಯೂಷ್‌ ಗೋಯೆಲ್‌ ಭಾರತೀಯ ಆರ್ಥಿಕ ವ್ಯವಸ್ಥೆಯ ಕೀಲಿಕೈಗಳನ್ನಿಟ್ಟುಕೊಂಡಿದ್ದಾರೆ. ಅಲ್ಲದೆ, ಕ್ಯಾಪ್ಟನ್‌ ಡೆಮೋ(ಮೋದಿ) ಅವರು ಗಾಢ ನಿದ್ರೆಯಲ್ಲಿದ್ದಾರೆ, ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.