Asianet Suvarna News Asianet Suvarna News

ಅತ್ತಿಬೆಲೆಯಲ್ಲಿ ಮಾರಾಕಾಸ್ತ್ರ ಹಿಡಿದು ಹಫ್ತ ವಸೂಲಿ ಮಾಡುತ್ತಿದ್ದವರು ಅಂದರ್

cctv video collected haphta

ಬೆಂಗಳೂರು(ಸೆ.24):​​ ಮಾರಾಕಾಸ್ತ್ರಗಳನ್ನು ತೋರಿಸಿ ಹಫ್ತ ವಸೂಲಿ ಮಾಡಿ ಪರಾರಿಯಾಗಿದ್ದ ಖಧೀಮರನ್ನ ಅಂದರ್​​​​ ಮಾಡುವಲ್ಲಿ  ಅತ್ತಿಬೆಲೆ ಪೊಲೀಸ್​ ಇನ್ಸ್​ಪೆಕ್ಟರ್​​​​​  ಟಿ.ಆರ್​​.ಶ್ರೀನಿವಾಸ್​​ ಅಂಡ್​​​​ ಟಿಂ ಯಶಸ್ವಿಯಾಗಿದ್ದಾರೆ.  

ಕಟೇಶ  ಅಲಿಯಾಸ್​​ ಕಟ್ಟೆ ,  ಎನ್​​​.ಬಾಬು ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳಾದ ವೆಂಕಟೇಶ್​​ ಮತ್ತು  ಎನ್​​ ಬಾಬು,  ಸ್ನೇಹಿತ ರೋಹಿತ್​​​​ನ​​​ ಜೊತೆಗೂಡಿ  ಅತ್ತಿಬೆಲೆಯಲ್ಲಿ ಮಾರಾಕಾಸ್ತ್ರ ಹಿಡಿದು ಹಫ್ತ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. 

ಈ ಟೀಮ್ ಕಳೆದ 20 ನೇ ತಾರೀಖಿನಿಂದು ಅತ್ತಿಬೆಲೆಯ ಬಳಗಾರನಹಳ್ಳಿ ಬಳಿಯಿರುವ ರೋಹಿತ್​​​ ಇಂಡಸ್ಟ್ರೀಸ್​​​ ಎಂಬ ಪ್ಯಾಕ್ಟರಿಗೆ ನುಗ್ಗಿ,  ಫ್ಯಾಕ್ಟರಿಯ ಮಾಲೀಕನಿಗೆ ಮಾರಾಕಾಸ್ತ್ರಗಳನ್ನು ತೋರಿಸುವ ಮೂಲಕ ಹೆದರಿಸಿ ಮಾಲೀಕನಿಂದ 5 ಸಾವಿರ  ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. 

ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಫ್ಯಾಕ್ಟರಿಯಲ್ಲಿ ಸಿಕ್ಕ ಸಿಸಿಟಿವಿ ಸಹಾಯದಿಂದ ಆರೋಪಿಗಳನ್ನು ಬಂಧಿಸುವಲ್ಲಿ  ಅತ್ತಿಬೆಲೆ ಪೊಲೀಸರು ಯಶಸ್ವಿಯಾಗಿದ್ದು, ಆ ಸಿಸಿಟಿವಿ ವಿಶುಯಲ್ಸ್​​​ ಈಗ ಸುವರ್ಣ ನ್ಯೂಸ್​​​'ಗೆ ಲಭ್ಯವಾಗಿದೆ. 


 

Latest Videos
Follow Us:
Download App:
  • android
  • ios