ಅಂಕಾರಾ[ಜ.01]: ವಿವಾದಿತ ಪತ್ರಕರ್ತ ಖಶೋಗಿ ದೇಹವನ್ನು ಹಂತಕರು ತುಂಡು ತುಂಡಾಗಿ ಕತ್ತರಿಸಿ ಅದನ್ನು ಸೂಟ್‌ಕೇಸ್‌ ಮತ್ತು ಬ್ಯಾಗಿನಲ್ಲಿ ತುಂಬಿ ಸಾಗಿಸಿರುವ ಸಿಸಿಟೀವಿ ದೃಶ್ಯವನ್ನು ಟರ್ಕಿ ಟೀವಿ ಮಾಧ್ಯಮವೊಂದು ಪ್ರಸಾರ ಮಾಡಿದೆ.

ಎ- ಹಾಬರ್‌ ಟೀವಿಯಲ್ಲಿ ಭಾನುವಾರ ತೋರಿಸಲಾದ ದೃಶ್ಯಗಳಲ್ಲಿ ಮೂವರು ಹಂತಕರು 5 ಸೂಟ್‌ಕೇಸ್‌ ಮತ್ತು ಎರಡು ದೊಡ್ಡ ಬ್ಯಾಗುಗಳನ್ನು ಇಸ್ತಾಂಬುಲ್‌ನಲ್ಲಿರುವ ಸೌದಿ ಕೌನ್ಸಿಲ್‌ ಜನರಲ್‌ರ್‌ ಮನೆಗೆ ಸಾಗಿಸಿರುವುದು ಕಂಡು ಬಂದಿದೆ.

ಖಶೋಗಿ ಹತ್ಯೆ ನಡೆದ ಸೌದಿ ದೂತಾವಾಸ ಕಚೇರಿಯಿಂದ ಅನತಿದೂರಲ್ಲೇ ಈ ನಿವಾಸವಿದೆ. ವಾಷಿಂಗ್ಟನ್‌ಪೋಸ್ಟ್‌ನ ಪತ್ರಕರ್ತರಾಗಿದ್ದ ಖಶೋಗಿ ಅ.2ರಂದು ಸೌದಿ ದೂತಾವಾಸ ಕಚೇರಿಯನ್ನು ಪ್ರವೇಶಿಸಿದ ವೇಳೆ ಹತ್ಯೆಯಾಗಿದ್ದರು.