ಹಿಂದಿ ಹೇರಿಕೆಗೆ ಮುಂದಾದ ಕೇಂದ್ರ-ಕನ್ನಡ ಸೇರಿದಂತೆ 17 ಭಾಷೆಗಳಿಗೆ ಕೊಕ್

CBSE removes 17 languages from national teacher test
Highlights

ಕೇಂದ್ರ ಸರ್ಕಾರದ ನಾಲ್ಕು ವರ್ಷದ ಆಡಳಿತದಲ್ಲಿ ಹಿಂದಿ ಹೇರಿಕೆ ಹಲವು ಬಾರಿ ಪ್ರತಿಧ್ವನಿಸಿದೆ. ಇದೀಗ ಕೇಂದ್ರ ಸರ್ಕಾರ ಸದ್ದಿಲ್ಲದೇ ಸಂಪೂರ್ಣ ಹಿಂದಿ ಮಯ ಮಾಡಲು ಮುಂದಾಗಿದೆ. ಸಿಬಿಎಸ್‌ಸಿಯ ನೂತನ ನಿಯದಲ್ಲಿ ಕನ್ನಡವನ್ನ ಕಡೆಗಣಿಸಲಾಗಿದೆ. ಈ ಮೂಲಕ ಹಿಂದಿ ಹೇರಿಕೆ ಮಾಡಲಾಗಿದೆ.

ದೆಹಲಿ(ಜೂ.18): ಹಿಂದಿ ಹೇರಿಕೆಗೆ ಕೇಂದ್ರ ಸರ್ಕಾರ ವ್ಯವಸ್ಥಿತ ಯೋಜನೆ ಜಾರಿಗೊಳಿಸಿದೆ. ಈಗಾಗಲೇ ಶಿಕ್ಷಣ ಕ್ಷೇತ್ರ, ಆಡಳಿತ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ಹೇರಿಕೆಗೆ ಮುಂದಾಗಿದ್ದ ಕೇಂದ್ರ ಸರ್ಕಾರ ಇದೀಗ ಸದ್ದಿಲ್ಲದೇ ದಕ್ಷಿಣ ಭಾರತದ ಭಾಷೆಗಳನ್ನ ಕಡೆಗಣಿಸಿ ಹಿಂದಿ ಭಾಷೆ ಹೇರಲು ಮುಂದಾಗಿದೆ.  ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯಿಂದ ಇದೀಗ ಕನ್ನಡ ಸೇರಿದಂತೆ 17 ಭಾಷೆಗಳನ್ನ ಸಿಬಿಎಸ್‌ಸಿ ತೆಗೆದುಹಾಕಿದೆ.  ಈ ಮೂಲಕ ಸಂಪೂರ್ಣ ಹಿಂದಿ ಹೇರಿಕೆ ಮಾಡಿದೆ.

ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಐಚ್ಚಿಕ ಭಾಷೆಗಳಲ್ಲಿ ಇದೀಗ ಇಂಗ್ಲೀಷ್, ಹಿಂದಿ ಹಾಗೂ ಸಂಸ್ಕೃತ ಬಾಷೆಗಳನ್ನ ಉಳಿಸಿಕೊಂಡು, ಕನ್ನಡ, ಮಲೆಯಾಳಂ, ತೆಲೆಗು,ತಮಿಳು ಸೇರಿದಂತೆ 17  ಭಾಷೆಗಳನ್ನ ತೆಗೆದುಹಾಕಲಾಗಿದೆ. ಹಳೇ ನಿಯಮದ ಪ್ರಕಾರ ಪರೀಕ್ಷೆ ಬರೆಯಲು 20 ಭಾಷೆಗಳ ಪೈಕಿ 2 ಭಾಷೆಗಳನ್ನ ಆಯ್ಕೆ ಮಾಡೋ ಅವಕಾಶವಿತ್ತು. ಆದರೆ ನೂತನ ನಿಯಮದ ಪ್ರಕಾರ 3 ಭಾಷೆಗಳಲ್ಲಿ 2ನ್ನ ಆಯ್ಕೆ ಮಾಡಬೇಕಿದೆ.

ಸಿಬಿಎಸ್‌ಸಿ ನಿರ್ಧಾರದಿಂದ ದಕ್ಷಿಣ ಭಾರತದಿಂದ ಪರೀಕ್ಷೆ ಬರೆಯುವವರಿಗೆ ಸಮಸ್ಯೆಯಾಗಲಿದೆ. ದಕ್ಷಿಣ ಭಾರತದ ರಾಜ್ಯಗಳು ಹಾಗೂ ಇತರ ರಾಜ್ಯಗಳ ಅಭ್ಯರ್ಥಿಗಳಿಗೆ ತಮ್ಮ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲದಿದ್ದರೆ, ಅವರು ಮಕ್ಕಳಿಗೆ ಪಾಠ ಮಾಡುವುದು ಹೇಗೆ ಎಂದು ಶಿಕ್ಷಣ ಸಂಸ್ಥೆಗಳ ಸಂಚಾಲಕ ಪ್ರಿನ್ಸ್ ಗಜೇಂದ್ರ ಬಾಬು ಹೇಳಿದ್ದಾರೆ.

loader