ನವದೆಹಲಿ(ನ. 29)  ಸಿಬಿಎಸ್‌ ಇ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರ ಸಣ್ಣ ಶಾಕ್ ನೀಡಿದೆ. 2020 ರಿಂದ ಪರೀಕ್ಷಾ ಶುಲ್ಕವನ್ನು 750 ರೂ. ನಿಂದ 1500ರೂ. ಗೆ ಏರಿಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಡಾ. ರಮೇಶ್ ಪೊಖ್ರಿಯಾಲ್ ತಿಳಿಸಿದ್ದಾರೆ.

ಸಿಬಿಎಸ್ ಇ ಪರೀಕ್ಷಾ ಫೀ ಏರಿಕೆಗೆ ನಿರ್ಧಾರ ಮಾಡಿದೆ. ನೋ ಲಾಸ್, ನೋ ಪ್ರಾಫಿಟ್ ನಿಯಮದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ದೆಹಲಿ ಸರ್ಕಾರದ ಅಧೀನದಲ್ಲಿ ಬರುವ ಕೆಲ ಶಾಲೆಗಳನ್ನು ಹೊರತು ಪಡಿಸಿ ಎಸ್ ಸಿ/ ಎಸ್ ಟಿ ಸೇರಿದಂತೆ ಎಲ್ಲರಿಗೂ ಒಂದೇ ಮಾದರಿಯ ಶುಲ್ಕ ನೀತಿ ಜಾರಿಯಲ್ಲಿರಲಿದೆ ಎಂದು ರಮೇಶ್ ತಿಳಿಸಿದ್ದಾರೆ.

ರಾಜ್ಯಸಭೆಯೊಂದರಲ್ಲಿ ಪ್ರಶ್ನೆಗೆ ಉತ್ತರ ನೀಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವರು, ದೆಹಲಿ ಸರ್ಕಾರದ ಅಧೀನದಲ್ಲಿರುವ 1299 ಶಾಲೆಗಳ ಕ್ಲಾಸ್ 10 ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು 375 ರೂ. ನಿಂದ 1200 ರೂ. ಗೆ ಏರಿಕೆ ಮಾಡಲಾಗಿದೆ. ಕ್ಲಾಸ್ 12 ವಿದ್ಯಾರ್ಥಿಗಳ ಶುಲ್ಕವನ್ನು 600 ರಿಂದ 1200 ಕ್ಕೆ ಏರಿಕೆ ಮಾಡಲಾಗಿದೆ . ಇದನ್ನು ಶೇ. 2300 ರಷ್ಟು ಏರಿಕೆ ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಪರೀಕ್ಷಾ ಶುಲ್ಕ ವಿಚಾರದಲ್ಲಿ ಯಾವುದೇ ಮೀಸಲು ಇಲ್ಲ. ಎಲ್ಲರಿಗೂ ಒಂದೇ ನಿಯಮ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.