ಈ ಬಾರಿ ಶೇ.82.02 ಫಲಿತಾಂಶ ಪ್ರಕಟಗೊಂಡಿದ್ದು,ಕಳೆದ ಬಾರಿಗಿಂತ(83.05) ಶೇ.1.03 ಕಡಿಮೆಯಾಗಿದೆ. ಕೇರಳದ ತಿರುವನಂತ'ಪುರ(95.62) , ಚೆನ್ನೈ(93.60) ಹಾಗೂ ದೆಹಲಿ(88.37) ಪ್ರಾಂತ್ಯದ ವಿದ್ಯಾರ್ಥಿಗಳು ಹೆಚ್ಚು ಫಲಿತಾಂಶದೊಂದಿಗೆ ತೇರ್ಗಡೆಯಾಗಿದ್ದಾರೆ.

ನವದೆಹಲಿ(ಮೇ.28): ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್'ಸಿ) 12ನೇ ತರಗತಿಯ 2017ನೇ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು, ಉತ್ತರ ಪ್ರದೇಶ ನೋಯ್ಡಾ'ದ ರಕ್ಷಾ ಗೋಪಾಲ್ ಶೇ.99.06 ಅಂಕಗಳೊಂದಿಗೆ ಮೊದಲ ರ‌್ಯಾಂಕ್ ಹಾಗೂ ಚಂಢೀಘಡದ ಭೂಮಿ ಸಾವಂತ್ ಶೇ. 99.04 ಅಂಕದೊಂದಿಗೆ ಎರಡನೇ ರ‌್ಯಾಂಕ್ ಪಡೆದಿದ್ದಾರೆ.

ಈ ಬಾರಿ ಶೇ.82.02 ಫಲಿತಾಂಶ ಪ್ರಕಟಗೊಂಡಿದ್ದು,ಕಳೆದ ಬಾರಿಗಿಂತ(83.05) ಶೇ.1.03 ಕಡಿಮೆಯಾಗಿದೆ. ಕೇರಳದ ತಿರುವನಂತ'ಪುರ(95.62) , ಚೆನ್ನೈ(93.60) ಹಾಗೂ ದೆಹಲಿ(88.37) ಪ್ರಾಂತ್ಯದ ವಿದ್ಯಾರ್ಥಿಗಳು ಹೆಚ್ಚು ಫಲಿತಾಂಶದೊಂದಿಗೆ ತೇರ್ಗಡೆಯಾಗಿದ್ದಾರೆ. ಲಿಂಗವಾರು ಫಲಿತಾಂಶಕ್ಕೆ ಹೋಲಿಸಿದರೆ ವಿದ್ಯಾರ್ಥಿನಿಯರು(87.05) ವಿದ್ಯಾರ್ಥಿ'ಗಳಿಗಿಂತ(78) ಹೆಚ್ಚು ತೇರ್ಗಡೆಯಾಗಿದ್ದಾರೆ. ಆದರೆ 2016ನೇ ಸಾಲಿಗಿಂತ ಶೇ.1ರಷ್ಟು ಕಡಿಮೆಯಾಗಿದೆ.

ಈ ಬಾರಿ 10,76,761 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, 10,20,762 ಮಂದಿ ಮಾತ್ರ ಬರೆದಿದ್ದರು. ಮಂಡಳಿ ಮರು ಮೌಲ್ಯಮಾಪನ ನಿಯಮವಿಲ್ಲವೆಂದು ಕಠಿಣವಾಗಿ ತನ್ನ ನಿರ್ಧರಿಸಿದ್ದು,. ವಿದ್ಯಾರ್ಥಿಗಳ ಹೆಚ್ಚಿನ ಮಾಹಿತಿಗಾಗಿ ಹಾಗೂ ಸಮಾಲೋಚನೆಗಾಗಿ 1800 11 8004 ಸಂಖ್ಯೆಯನ್ನು ಪ್ರಕಟಿಸಿದೆ.