ಸಿಬಿಎಸ್ಸಿ 10ನೇ ತರಗತಿ ಶೇ.86 ಫಲಿತಾಂಶ : ನಾಲ್ವರು 500ಕ್ಕೆ 499

CBSE Class 10 result: Four students top exam with 499 out of 500 marks
Highlights

ನಾಲ್ವರು ವಿದ್ಯಾರ್ಥಿಗಳು 500 ಕ್ಕೆ 499 ಅಂಕ ಗಳಿಸಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಗೊರಗಾವ್'ನ ಪ್ರಕಾರ್ ಮಿತ್ತಾಲ್, ಉತ್ತರ ಪ್ರದೇಶದ ರಿಂಜ್ಮಿಮ್ ಅಗರ್'ವಾಲ್, ನಂದಿನಿ ಗಾರ್ಗ್ ಹಾಗೂ ಕೊಚ್ಚಿಯ ಜಿ.ಶ್ರೀಲಕ್ಷ್ಮಿ 499 ಅಂಕ ಅಂಕ ಪಡೆದವರು.

ನವದೆಹಲಿ(ಮೇ.29):  ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ[ಸಿಬಿಎಸ್'ಸಿ] 10ನೇ ತರಗತಿಯ 2018ನೇ ಸಾಲಿನ ಫಲಿತಾಂಶ ಪ್ರಕಟಿಸಿದ್ದು ಶೇ.86.70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ನಾಲ್ವರು ವಿದ್ಯಾರ್ಥಿಗಳು 500 ಕ್ಕೆ 499 ಅಂಕ ಗಳಿಸಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಗೊರಗಾವ್'ನ ಪ್ರಕಾರ್ ಮಿತ್ತಾಲ್, ಉತ್ತರ ಪ್ರದೇಶದ ರಿಂಜ್ಮಿಮ್ ಅಗರ್'ವಾಲ್, ನಂದಿನಿ ಗಾರ್ಗ್ ಹಾಗೂ ಕೊಚ್ಚಿಯ ಜಿ.ಶ್ರೀಲಕ್ಷ್ಮಿ 499 ಅಂಕ ಪಡೆದವರು.
27,476 ವಿದ್ಯಾರ್ಥಿಗಳು ಶೇ.95ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ತಿರುವನಂತಪುರ ಶೇ.99.60, ಚೆನ್ನೈ 97.37, ಅಜ್ಮೀರ್ 91.86  ಪ್ರಮವಾಗಿ ಮೊದಲ ಮೂರು ಸ್ಥಾನ ಪಡೆದರೆ ಶೇ.78.62 ಪಡೆದಿರುವ ದೆಹಲಿ ನಾಲ್ಕನೆ ಸ್ಥಾನದಲ್ಲಿದೆ. ಪ್ರತಿ ಸಾರಿಯಂತೆ ಈ ಬಾರಿಯೂ ವಿದ್ಯಾರ್ಥಿನಿಯರೆ ಮೇಲುಗೈ ಸಾಧಿಸಿದ್ದಾರೆ.
ಫಲಿತಾಂಶಕ್ಕಾಗಿ ಕೆಳಗಿನ ಸೈಟ್'ಗಳನ್ನು ಕ್ಲಿಕ್ಕಿಸಿ 
www.cbseresults.nic.in

www.cbse.nic.in

www.results.nic.in

loader