ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ

CBSE 12th Result 2018 Declared
Highlights

ಸಿಬಿಎಸ್‌ಇ 12 ನೇ ತರಗತಿ ಫಲಿತಾಂಶವನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಪ್ರಕಟ ಮಾಡಿದೆ. ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟ ಮಾಡಿದ್ದು ವಿದ್ಯಾರ್ಥಿಗಳು cbse.nic.in. ವೆಬ್ ಸೈಟ್ ಗೆ ಭೇಟಿ ನೀಡಿ  ಪಡೆದುಕೊಳ್ಳಬಹುದಾಗಿದೆ. 

ನವದೆಹಲಿ: ಸಿಬಿಎಸ್‌ಇ 12 ನೇ ತರಗತಿ ಫಲಿತಾಂಶವನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಪ್ರಕಟ ಮಾಡಿದೆ. ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟ ಮಾಡಿದ್ದು ವಿದ್ಯಾರ್ಥಿಗಳು cbse.nic.in. ಇಲ್ಲಿ ಪಡೆದುಕೊಳ್ಳಬಹುದಾಗಿದೆ. 

ಕಳೆದ ವರ್ಷಕ್ಕಿಂತ ಈ ವರ್ಷ ಸಿಬಿಎಸ್ಇ ಫಲಿತಾಂಶದಲ್ಲಿ ಏರಿಕೆ ಕಂಡು ಬಂದಿದೆ. ಕಳೆದ ವರ್ಷ ಶೇ.82.02ರಷ್ಟಿದ್ದು, ಈ ವರ್ಷ ಶೇ.83.01ಕ್ಕೆ ಏರಿಕೆಯಾಗಿದೆ. 

ಈ ಬಾರಿಯ ಫಲಿತಾಂಶದಲ್ಲಿ ಶೇ.97.32 ಫಲಿತಾಂಶ ಪಡೆಯುವ ಮೂಲಕ ತ್ರಿವೆಂಡ್ರಮ್  ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ,  ದ್ವಿತೀಯ ಸ್ಥಾನದಲ್ಲಿ ಚೆನ್ನೈ ಇದ್ದು 93.87ರಷ್ಟು ಫಲಿತಾಂಶ ಪಡೆದಿದೆ. 

ಇನ್ನು ಈ ಬಾರಿ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಒಟ್ಟು 15,674 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 14,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

ಘಾಜಿಯಾಬಾದ್ ನ ತಾಜ್ ಎಕ್ಸ್ ಪ್ರೆಸ್ ಶಾಲೆಯ ಮೇಘನಾ ಶ್ರೀ ವಾಸ್ತವ್ 499 ಅಂಕವನ್ನು ಪಡೆಯುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ. 497 ಅಂಕಗಳನ್ನು ಪಡೆಯುವ ಮೂಲಕ ಅನೌಷ್ಕಾ ಚಂದ್ರ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ತೃತೀಯ ಸ್ಥಾನವನ್ನು 7 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. 

loader