Asianet Suvarna News Asianet Suvarna News

ಭ್ರಷ್ಟ ಸಿಬಿಐ ಹಿಂದೆ ಪ್ರಧಾನಿ ಕಚೇರಿ: ಖರ್ಗೆ ಆರೋಪ

ಸಿಬಿಐ ಗೊಂದಲಗಳು ಇದೀಗ ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಿದೆ. ಕೇಂದ್ರ ಸರಕಾರ ಮತ್ತು ಪ್ರಧಾನ ಮಂತ್ರಿ ಕಚೇರಿ ಮೇಲೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ಮಾಡಿದ್ದಾರೆ.

CBI war Congress Leader Mallikarjun Kharge targets PM Office
Author
Bengaluru, First Published Oct 23, 2018, 8:07 PM IST
  • Facebook
  • Twitter
  • Whatsapp

ಕಲಬುರಗಿ‌[ಅ.23]  ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಆಸ್ಥಾನಾ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕ ಸಂಬಂಧಿಸಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ರಾಕೇಶ್ ಅಸ್ಥಾನ್ ನೇರವಾಗಿ ಪ್ರಧಾನಿ ನರೇಂದ್ರ ಮೋದಿಗೆ ಗೊತ್ತಿರುವ ವ್ಯಕ್ತಿ.  ರಾಕೇಶ್ ಆಸ್ಥಾನ್ ಜಾರ್ಖಂಡ್ ಮೂಲದವರು ಹಾಗೂ ಗುಜರಾತ್ ಕೇಡಾರ್ ಐಪಿಎಸ್ ಅಧಿಕಾರಿ. ಆಸ್ಥಾನ್‌ರನ್ನ ನೇರವಾಗಿ ಪಿಎಂಓ ಕಚೇರಿಯವರೇ ನೇಮಕ ಮಾಡಿಕೊಂಡಿದ್ದಾರೆ. ಅಂತಹ ಅಧಿಕಾರಿ ಮೇಲೆ ಆರೋಪ ಬಂದಿದೆ ಅಂದರೆ ನೀವೇ ಯೋಚನೆ ಮಾಡಿ ಎಂದು ಖರ್ಗೆ ಪ್ರಶ್ನೆ ಮಾಡಿದ್ದಾರೆ.

ಇವ‌ತ್ತೂ ಸಿವಿಸಿ ಒಂದುಕಡೆ, ಸಿಬಿಐ ಒಂದಕಡೆ, ಭ್ರಷ್ಟ ಅಧಿಕಾರಿಗಳ ಕೆಳಗಡೆ ಇರೋವವರು ಒಂದು‌ ಕಡೆ, ಅವರು ಪಿಎಂಓ ಕಚೇರಿಯ ನಿರ್ದೇಶನ ಕೇಳ್ತಾರೆ, ಕೆಲವರು ನೇರವಾಗಿ ಸಿಬಿಐ ನಿರ್ದೇಶಕರಿಗೆ ಹೇಳ್ತಾರೆ. ಕೆಲವು ಸಲ ಕೆಳಗಿನ ಅಧಿಕಾರಿಗಳಿಗೆ ಹೇಳಿ ಜನರಿಗೆ ಕಿರುಕುಳ ನೀಡುತ್ತಾರೆ. ಇಂದು‌ ದುಡ್ಡು ತಗೊಂಡು ಸಿಕ್ಕಬಿದ್ದಾಗ ಏನೇನೋ‌ ಹೇಳುತ್ತಾರೆ ಎಂದು ಪ್ರಕರಣಕ್ಕೆ ಕೇಂದ್ರ ಸರಕಾರ ಲಿಂಕ್ ಮಾಡಿದ್ದಾರೆ.

ಇಂದು ದೇಶದ ಜನರಿಗೆ ನೆಮ್ಮದಿ ಜೀವನ ಇಲ್ಲದಂತಾಗಿದೆ. ಸಣ್ಣ ವ್ಯಾಪಾರಸ್ಥರಿಗಾಗಲಿ, ಅವರಿಗೆ ಬೇಕಾಗದ ವ್ತಕ್ತಿಗಳ ಮೇಲೆ ಸೇಡಿನ ಭಾವನೆ ತಗೆದುಕೊಳ್ಳುತ್ತಿದ್ದಾರೆ. ಯಾವ ಅಧಿಕಾರಿ ತಪ್ಪಿತಸ್ಥರಿದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದಕ್ಕೂ‌ ಮುನ್ನ ರಾಕೇಶ್ ಅಸ್ಥಾನ್‌ರನ್ನ ನೇರವಾಗಿ ಸಿಬಿಐ ವಿಶೇಷ ನಿರ್ದೇಶಕರಾಗಿ ನೇಮಿಸಲು ಕಾರಣವೇನೆಂಬ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು. ಈಗ ಕೇಂದ್ರ ಸರ್ಕಾರದ ಬಂಡವಾಳ ಹೊರಬಿದ್ದಿದೆ ಎಂದಿದ್ದಾರೆ.

Follow Us:
Download App:
  • android
  • ios