ಬೆಂಗಳೂರು(ನ.24):  ಐಎ​ಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವು ಪ್ರಕರಣಕ್ಕೆ ಸ್ಪಷ್ಟ ಚಿತ್ರಣ ನೀಡಿರುವ ಸಿಬಿಐ ಇದು ಕೊಲೆಯಲ್ಲ ಡಿ.ಕೆ.ರವಿ ಅವರು ತಮ್ಮ ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬೆಂಗಳೂರು ದಕ್ಷಿಣ ಎಸಿ ಡಿ.ಬಿ. ನಟೇಶ್​ಗೆ ನಾಳೆ ವರದಿ ಸಲ್ಲಿಸಲಿದ್ದಾರೆ.

ದಕ್ಷ ಅಧಿಕಾರಿಯಾಗಿದ್ದ ಡಿ.ಕೆ. ರವಿ ಅವರು 2015 ಮಾರ್ಚ್ 17ರಂದು  ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿನ ಬಗ್ಗೆ ಹಲವು ಶಂಕೆ ವ್ಯಕ್ತವಾಗಿದ್ದವು. ಕುಟುಂಬದವರು ಸೇರಿದಂತೆ ರಾಜ್ಯದಾದ್ಯಂತ ಹಲವು ಕಡೆ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ನಾಡಿನ ಎಲ್ಲಡೆ ಆಕ್ರೋಶ ತೀವ್ರವಾದ ಕಾರಣ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು.