ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ 2006ರಲ್ಲಿ ಏರ್‌ಸೆಲ್- ಮ್ಯಾಕ್ಸಿಸ್ ಒಪ್ಪಂದಕ್ಕೆ ವಿದೇಶಿ ಬಂಡವಾಳ ಹೂಡಿಕೆ ಅನುಮತಿ ನೀಡಿದ್ದರ ಸಂಬಂಧ ಸಿಬಿಐ ಕಾರ್ತಿ ಚಿದಂಬರಂ ಅವರಿಗೆ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ನವದೆಹಲಿ(ಸೆ.15): ಏರ್ಸೆಲ್- ಮ್ಯಾಕ್ಸಿಸ್ ಪ್ರಕರಣದಲ್ಲಿ ತಮ್ಮ ಪುತ್ರ ಕಾರ್ತಿಗೆ ಕಿರುಕುಳ ನೀಡುವ ಬದಲು ಸಿಬಿಐ ತಮ್ಮನ್ನು ಪ್ರಶ್ನೆ ಮಾಡಬೇಕು ಎಂದು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಸಿಬಿಐ ತಪ್ಪು ಮಾಹಿತಿ ಹಬ್ಬಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ 2006ರಲ್ಲಿ ಏರ್ಸೆಲ್- ಮ್ಯಾಕ್ಸಿಸ್ ಒಪ್ಪಂದಕ್ಕೆ ವಿದೇಶಿ ಬಂಡವಾಳ ಹೂಡಿಕೆ ಅನುಮತಿ ನೀಡಿದ್ದರ ಸಂಬಂಧ ಸಿಬಿಐ ಕಾರ್ತಿ ಚಿದಂಬರಂ ಅವರಿಗೆ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ವಿಚಾರಣೆಗೆ ಹಾಜರಾಗುಲು ನಿರಾಕರಿಸಿದ್ದ ಕಾರ್ತಿ ಚಿದಂಬರಂ, ವಿಶೇಷ ಕೋರ್ಟ್ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ ಮತ್ತು ವಿಚಾರಣೆಯನ್ನು ರದ್ದುಗೊಳಿಸಿದೆ.
ಆದರೆ, ಸಿಬಿಐ ಮಾತ್ರ ವಿಚಾರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ಹೇಳಿಕೊಳ್ಳುತ್ತಿದೆ ಎಂದು ಹೇಳಿದ್ದರು. ಏರ್ಸೆಲ್- ಮ್ಯಾಕ್ಸಿಸ್ ಒಪ್ಪಂದಕ್ಕೆ ‘ನಾನು ಸಚಿವನಾಗಿದ್ದಾಗ ಅನುಮತಿ ನೀಡಿದ್ದೆ. ಹೀಗಾಗಿ ಸಿಬಿಐ ನನ್ನನ್ನು ವಿಚಾರಣೆ ನಡೆಸಬೇಕು. ಪುತ್ರ ಕಾರ್ತಿಗೆ ಅನಾವಶ್ಯಕ ಕಿರುಕುಳ ನೀಡಬಾರದು. ಪ್ರಕರಣದಲ್ಲಿ ಸಿಬಿಐ ತಪ್ಪು ಮಾಹಿತಿಯನ್ನು ಹಬ್ಬಿಸುತ್ತಿದೆ’ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
