ಐಎಎಸ್ ತಿವಾರಿ ನಿಗೂಢ ಸಾವು: ತನಿಖೆಗೆ ರಾಜ್ಯದಲ್ಲಿ ಸಿಬಿಐ

news | Friday, February 2nd, 2018
Suvarna Web Desk
Highlights
  • ಕಳೆದ ವರ್ಷ ಲಕ್ನೋ’ವಿನ ವಿಐಪಿ ಗೆಸ್ಟ್ ಹೌಸ್ ಹೊರಗಡೆ ಅನುಮಾನಸ್ಪದ ರೀತಿಯಲ್ಲಿ ಅನುರಾಗ್ ತಿವಾರಿ ಮೃತದೇಹ ಪತ್ತೆ
  • ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವು ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐಗೆ ವಹಿಸಿದೆ

ಬೀದರ್: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣವನ್ನು ತನಿಖೆ ನಡೆಸಲು ಸಿಬಿಐ ತಂಡವು ಇಂದು ಬೀದರ್’ಗೆ ಭೇಟಿ ನೀಡಿದೆ.

ಕಳೆದ ವರ್ಷ ಲಕ್ನೋ’ವಿನ ವಿಐಪಿ ಗೆಸ್ಟ್ ಹೌಸ್ ಹೊರಗಡೆ ಅನುಮಾನಸ್ಪದ ರೀತಿಯಲ್ಲಿ ಅನುರಾಗ್ ತಿವಾರಿ ಮೃತದೇಹ ಪತ್ತೆಯಾಗಿತ್ತು.

ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಹತ್ಯೆ ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐಗೆ ವಹಿಸಿದೆ. ಅವರದ್ದು ಸಹಜ ಸಾವಲ್ಲ. ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೋಸ್ಟ್ ಮಾರ್ಟಮ್ ವರದಿ ಹೇಳುತ್ತದೆ.

ಹಾಗಾಗಿ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕುಟುಂಬದವರು ಒತ್ತಾಯಿಸಿದ್ದರು. ತಿವಾರಿ ಯಾವುದೋ ಒಂದು ಹಗರಣವನ್ನು ಬಹಿರಂಗಪಡಿಸುವವರಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅನುರಾಗ್ ತಿವಾರಿಗೆ ಜೀವ ಬೆದರಿಕೆ ಇದ್ದು, ಈ ವಿಚಾರವನ್ನು ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡಿದ್ದರು ಎನ್ನಲಾಗಿದೆ.  ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಹೀಗಾಗಿ ಬೀದರ್ ಜನತೆ ಹಾಗೂ ಅವರ ಸಹೋದ್ಯೋಗಿಗಳು ಇವರ ಸಾವನ್ನು ಸಹಜವೆಂದು ಒಪ್ಪಿಕೊಳ್ಳುತ್ತಿಲ್ಲ.

Comments 0
Add Comment