ಆರ್’ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಇಂದು ಬೆಳಗ್ಗಿನ ಜಾವ ದಾಳಿ ನಡೆಸಿದ್ದಾರೆ. 2006ರಲ್ಲಿ ರೈಲ್ವೇ ಸಚಿವರಾಗಿದ್ದಾಗ ರಾಂಚಿ ಹಾಗೂ ಪುರಿಯಲ್ಲಿ ಹೊಟೇಲ್ ನಿರ್ಮಾಣ, ನಿರ್ವಹಣೆ ಹಾಗೂ ನಡೆಸುವ ಗುತ್ತಿಗೆಯನ್ನು ಖಾಸಗಿ ಕಂಪನಿಯೊಂದಕ್ಕೆ ನೀಡಿರುವ ವಿಚಾರದಲ್ಲಿ ಲಾಲೂ ವಿರುದ್ಧ ಸಿಬಿಐ ಪ್ರಕರಣವನ್ನು ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸಿಬಿಐಯು ದೆಹಲಿ, ಪಾಟ್ನಾ, ಗುರ್ಗಾಂವ್ ಹಾಗೂ ಇನ್ನಿತರ ಸ್ಥಳಗಳಲ್ಲಿ 12 ಕಡೆ ದಾಳಿ ನಡೆಸಿದೆ.

ನವದೆಹಲಿ (ಜು.07): ಆರ್’ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಇಂದು ಬೆಳಗ್ಗಿನ ಜಾವ ದಾಳಿ ನಡೆಸಿದ್ದಾರೆ.

2006ರಲ್ಲಿ ರೈಲ್ವೇ ಸಚಿವರಾಗಿದ್ದಾಗ ರಾಂಚಿ ಹಾಗೂ ಪುರಿಯಲ್ಲಿ ಹೊಟೇಲ್ ನಿರ್ಮಾಣ, ನಿರ್ವಹಣೆ ಹಾಗೂ ನಡೆಸುವ ಗುತ್ತಿಗೆಯನ್ನು ಖಾಸಗಿ ಕಂಪನಿಯೊಂದಕ್ಕೆ ನೀಡಿರುವ ವಿಚಾರದಲ್ಲಿ ಲಾಲೂ ವಿರುದ್ಧ ಸಿಬಿಐ ಪ್ರಕರಣವನ್ನು ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸಿಬಿಐಯು ದೆಹಲಿ, ಪಾಟ್ನಾ, ಗುರ್ಗಾಂವ್ ಹಾಗೂ ಇನ್ನಿತರ ಸ್ಥಳಗಳಲ್ಲಿ 12 ಕಡೆ ದಾಳಿ ನಡೆಸಿದೆ.

ದಾಳಿಗೆ ಪ್ರತಿಕ್ರಿಯಿಸಿರುವ ಆರ್’ಜೆಡಿ ನಾಯಕ ಮನೋಜ್ ಜಾ, ಇಂದಿನ ದಿನ ಇತಿಹಾಸಲ್ಲಿ ಕರಾಳ ದಿನವಾಗಿ ಗುರುತಿಸಲಾಗುವುದು. ತನಿಖಾ ಸಂಸ್ಥೆಗಳು ಬಿಜೆಪಿಯ ಮೈತ್ರಿಸಂಸ್ಥೆಗಳಾಗಿವೆ, ಹಾಗೂ ಬಿಜೆಪಿಯು ಅವುಗಳನ್ನು ಬಳಸುತ್ತಿದೆ ಎಂದಿದ್ದಾರೆ.

ಲಾಲೂ ನಿವಾಸ ಮೇಲೆ ಸಿಬಿಐ ದಾಳಿಗೆ ಸಂಬಂಧಿಸಿ ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಆರ್’ಜೆಡಿ ಜೊತೆ ಮೈತ್ರಿ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರನ್ನು ಆಗ್ರಹಸಿದ್ದಾರೆ.

ಅಪರಾಧ, ಭ್ರಷ್ಟಾಚಾರ ತಡೆ ಬಗ್ಗೆ ಮಾತನಾಡುವ ನಿತೀಶ್ ಈ ಬಗ್ಗೆ ಮೌನವನ್ನು ಮುರಿಯಲೇಬೇಕೆಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.