ಬಹುಕೋಟಿ ಹಗರಣವೊಂದರ ಆರೋಪದಡಿಯಲ್ಲಿ ಸಿಲುಕಿರುವ ಆರೋಗ್ಯ ಸಚಿವರ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದಲ್ಲದೇ ಚೆನ್ನೖನ ವಿವಿಧ ೪೦ ಪ್ರದೇಶಗಳ ಮೇಲೂ ದಾಳಿ ನಡೆಸಲಾಗಿದೆ. 

ಚೆನ್ನೈ : ತಮಿಳುನಾಡು ಆರೋಗ್ಯ ಸಚಿವರ ಮನೆ ಮೇಲೆ ಸಿಬಿಐ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರೋಗ್ಯ ಸಚಿವ ಸಿ. ವಿಜಯಾ ಭಾಸ್ಕರ್ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಬಹುಕೋಟಿ ಗುಟ್ಕಾ ಹಗರಣದ ಆರೋಪ ಎದುರಾಗಿದ್ದು ಈ ನಿಟ್ಟಿನಲ್ಲಿ ದಾಳಿ ನಡೆಸಲಾಗಿದೆ. 

ಅಲ್ಲದೇ ಚೆನ್ನೈನ 40 ವಿವಿಧ ಪ್ರದೇಶಗಳ ಮೇಲೆ ದಾಳಿ ನಡೆದಿದ್ದು ಚೆನ್ನೈ ಸಿಟಿ ಪೊಲೀಸ್ ಕಮಿಷನರ್ ಎಸ್. ಜಾರ್ಜ್ ಹಾಗೂ ಮಾಜಿ ಸಚಿವ ರಮಣ ಅವರಿಗೆ ಸೇರಿದ ಪ್ರದೇಶಗಳ ಮೇಲೂ ದಾಳಿ ನಡೆದಿದೆ. 

ಈ ಪ್ರಕರಣವನ್ನು ಕಳೆದ ಏಪ್ರಿಲ್ 26 ರಂದು ಸಿಬಿಐಗೆ ವಹಿಸಲು ಮದ್ರಾಸ್ ಹೈ ಕೋರ್ಟ್ ಸೂಚನೆ ನೀಡಿತ್ತು. ಚೆನ್ನೈ ನಲ್ಲಿ 2017ರ ಜುಲೈನಲ್ಲಿ ಬಹುಕೋಟಿ ಮೊತ್ತದ ಗುಟ್ಕಾ ಹಗರಣವು ಬೆಳಕಿಗೆ ಬಂದಿದ್ದು ಇದರಲ್ಲಿ ಭಾರೀ ಪ್ರಮಾಣದಲ್ಲಿ ತೆರಿಗೆ ವಂಚನೆ ಮಾಡಿರುವ ಆರೋಪ ಎದುರಾಗಿತ್ತು.