ಸುಪ್ರೀಂಗೆ ಸಲ್ಲಿಸಿದ್ದ ರಹಸ್ಯ ವರದಿ ಚಿದು ಮನೆಯಲ್ಲಿ ಪತ್ತೆ

CBI Probing How Aircel Maxis Draft Report Reached P Chidambaram
Highlights

ಏರ್‌ಸೆಲ್‌-ಮ್ಯಾಕ್ಸಿಸ್‌ ಪ್ರಕರಣದ ತನಿಖೆಗೆ ಸಂಬಂಧಿಸಿ ಸಿದ್ಧಗೊಂಡಿದ್ದ 2013ರ ಕರಡು ವರದಿ ಸೋರಿಕೆಯಾಗಿರುವ ಆಪಾದನೆಗಳ ಬಗ್ಗೆ ಸಿಬಿಐ ಆಂತರಿಕ ತನಿಖೆ ಆರಂಭಿಸಿದೆ.

ನವದೆಹಲಿ: ಏರ್‌ಸೆಲ್‌-ಮ್ಯಾಕ್ಸಿಸ್‌ ಪ್ರಕರಣದ ತನಿಖೆಗೆ ಸಂಬಂಧಿಸಿ ಸಿದ್ಧಗೊಂಡಿದ್ದ 2013ರ ಕರಡು ವರದಿ ಸೋರಿಕೆಯಾಗಿರುವ ಆಪಾದನೆಗಳ ಬಗ್ಗೆ ಸಿಬಿಐ ಆಂತರಿಕ ತನಿಖೆ ಆರಂಭಿಸಿದೆ. ಮಾಜಿ ಸಚಿವ ಚಿದಂಬರಂ ಕುಟುಂಬಕ್ಕೆ ಸೇರಿದ ಜೋರ್‌ಬಾಗ್‌ ಪ್ರದೇಶದ ಮೇಲೆ ಜ.13ರಂದು ಜಾರಿ ನಿರ್ದೇಶನಾಲಯದ ಸಿಬ್ಬಂದಿ ದಾಳಿ ನಡೆಸಿದ್ದ ವೇಳೆ ಈ ರಹಸ್ಯ ಕರಡು ವರದಿ ಪತ್ತೆಯಾಗಿತ್ತು.

ಸಿಬಿಐಗೆ ಸೇರಿದ ರಹಸ್ಯ ವರದಿಯೊಂದು ಸಚಿವರ ಕುಟುಂಬಕ್ಕೆ ಸೇರಿದ ಮನೆ ಸೇರಿದ್ದು ಹೇಗೆ ಎಂಬುದನ್ನು ಇದೀಗ ತನಿಖೆಗೆ ಒಳಪಡಿಸಲಾಗಿದೆ. ಏರ್‌ಸೆಲ್‌-ಮ್ಯಾಕ್ಸಿಸ್‌ ವ್ಯವಹಾರ ಪ್ರಕರಣದ ಸಿಬಿಐ ಕರಡು ವರದಿ 2013ರಲ್ಲಿ ಸುಪ್ರೀಂ ಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆಯಾಗಿತ್ತು. ಆಗ ಸಲ್ಲಿಕೆಯಾದ ವರದಿ ಮತ್ತು ಮುಟ್ಟುಗೋಲು ಹಾಕಿಕೊಳ್ಳಲಾದ ವರದಿಯ ಕೆಲವು ಭಾಗಗಳು ಹೋಲಿಕೆಯಾಗುತ್ತಿದೆ ಎನ್ನಲಾಗಿದೆ.

loader