ನೋಟುಗಳ ಕಂತೆಗಳು ಪತ್ತೆಯಾಗಿವೆ. ಈ ನೋಟುಗಳನ್ನು ಕಟ್ಟಿ ಜೋಡಿಸಿ ಇಡಲಾಗಿದೆ. ಕಳೆದ 60 ಗಂಟೆಗಳಿಂದ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ

ನವದೆಹಲಿ(ಆ.04): ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಆಸ್ತಿಗಳ ಮೇಲೆ ನಡೆಯುತ್ತಿರುವ ಆದಾಯ ತೆರಿಗೆ ಇಲಾಖೆ ದಾಳಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ನವದೆಹಲಿಯ ಸಫ್ದರ್ಜಂಗ್'ನ ಅವರನಿವಾಸದಲ್ಲಿ ಕಂತೆ, ಕಂತೆ ನೋಟು ಪತ್ತೆಯಾಗಿದೆ.

ಇಂಧನ ಸಚಿವರ ದೆಹಲಿ ನಿವಾಸದಲ್ಲಿ 8.6 ಕೋಟಿ ರೂ. ಪತ್ತೆಯಾಗಿದೆ. ಮೊದಲ ಸಾಲಿನಲ್ಲಿ100 ರೂ, 2ನೇ ಸಾಲಿನಲ್ಲಿ 500 ರೂ. 3ನೇ ಸಾಲಿನಲ್ಲಿ 2000 ರೂ. ನೋಟುಗಳ ಕಂತೆಗಳು ಪತ್ತೆಯಾಗಿವೆ. ಈ ನೋಟುಗಳನ್ನು ಕಟ್ಟಿ ಜೋಡಿಸಿ ಇಡಲಾಗಿದೆ. ಕಳೆದ 60 ಗಂಟೆಗಳಿಂದ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಐಟಿ ಅಧಿಕಾರಿಗಳುನಿರಂತರ ಕಾರ್ಯಾಚರಣೆನಡೆಸುತ್ತಿದ್ದಾರೆ.ಈಗಾಗಲೇ ಬೆಂಗಳೂರಿನ ನಿವಾಸ, ಈಗಲ್ಟನ್ ರೆಸಾರ್ಟ್ ಸೇರಿದಂತೆ ಹಲವು ಕಡೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.