ಮಲ್ಯ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿತು.

ಮುಂಬೈ(ಜ.31): ಐಡಿಬಿಐ ಬ್ಯಾಂಕ್‌'ನಿಂದ ಅಕ್ರಮವಾಗಿ ಸಾಲ ಪಡೆದ ಪ್ರಕರಣದಲ್ಲಿ ಇಲ್ಲಿನ ವಿಶೇಷ ನ್ಯಾಯಾಲಯ ಉದ್ಯಮಿ ವಿಜಯ ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್ (ಎನ್‌'ಬಿಡಬ್ಲ್ಯು) ಹೊರಡಿಸಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಲಂಡನ್‌'ನಲ್ಲಿರುವ ಮದ್ಯದ ದೊರೆಯನ್ನು ಗಡೀಪಾರು ಮಾಡಲು ಅನುಮತಿ ನೀಡಬೇಕೆಂದು ಕೋರಿತು. ಇದನ್ನು ಮನ್ನಿಸಿದ ನ್ಯಾಯಾಲಯ, ಮಲ್ಯ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿತು. ಮಲ್ಯ ಅವರ ಲಂಡನ್ ವಿಳಾಸವನ್ನು ವಾರಂಟ್‌'ನಲ್ಲಿ ನಮೂದಿಸಲಾಗಿದೆ.

ಈಗಾಗಲೇ ಐಡಿಬಿಐ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಸೇರಿ 9 ಜನರನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ.