ನವದೆಹಲಿ [ಜು.13]: ಸರ್ಕಾರಿ ಯೋಜನೆಯೊಂದರ ಗುತ್ತಿಗೆಯನ್ನು ತಮ್ಮ ಸಹೋದರನಿಗೆ ನೀಡಿ ಭ್ರಷ್ಟಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಅರುಣಾಲ ಪ್ರದೇಶ ಮಾಜಿ ಮುಖ್ಯಮಂತ್ರಿ ನಬಂ ಟುಕಿ ವಿರುದ್ಧ ಸಿಬಿಐ 16 ವರ್ಷದ ಬಳಿಕ ಪ್ರಕರಣ ದಾಖಲಿಸಿಕೊಂಡಿದೆ. 

2003ರಲ್ಲಿ ಗ್ರಾಹಕ ವ್ಯವಹಾರ ಹಾಗೂ ನಾಗರಿಕ ಪೂರೈಕೆ ಸಚಿವರಾಗಿದ್ದ ನಬಂ ಟುಕಿ, ನಿಯಮಗಳನ್ನು ಗಾಳಿಗೆ ತೂರಿ ಸಹೋದರ ನಬಂ ತಗಂಗೆ 3.20 ಕೋಟಿ ರು. ಗುತ್ತಿಗೆಯನ್ನು ನೀಡಿದ್ದರು.

ಈ ಸಂಬಂಧ ನಬಂ ತಗಂ ವಿರುದ್ಧವೂ ಪ್ರಕರಣ ದಾಖಲಾಗಿದೆ. 2011​ರಿಂದ 16ರ ಅವಧಿಯಲ್ಲಿ ಟುಕಿ ಅರುಣಾಚಲ ಪ್ರದೇಶ ಮುಖ್ಯಮಂತ್ರಿಯಾಗಿದ್ದರು.