ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ ಮತ್ತು ವಿಜಯಾ ಬ್ಯಾಂಕ್‌ಗಳಿಗೆ 290 ಕೋಟಿ ರು. ನಷ್ಟಉಂಟು ಮಾಡಿದ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿರುವ ಕೆನರಾ ಬ್ಯಾಂಕಿನ ಕಾರ್ಪೊರೆಟ್‌ ಶಾಖೆಯ ಮಾಜಿ ಡಿಜಿಎಂ ಟಿ.ಎಲ್‌.ಪೈ ಅವರನ್ನು ಸಿಬಿಐ ಮಂಗಳವಾರ ಬಂಧಿಸಿದೆ.

ನವದೆಹಲಿ: ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ ಮತ್ತು ವಿಜಯಾ ಬ್ಯಾಂಕ್‌ಗಳಿಗೆ 290 ಕೋಟಿ ರು. ನಷ್ಟಉಂಟು ಮಾಡಿದ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿರುವ ಕೆನರಾ ಬ್ಯಾಂಕಿನ ಕಾರ್ಪೊರೆಟ್‌ ಶಾಖೆಯ ಮಾಜಿ ಡಿಜಿಎಂ ಟಿ.ಎಲ್‌.ಪೈ ಅವರನ್ನು ಸಿಬಿಐ ಮಂಗಳವಾರ ಬಂಧಿಸಿದೆ.

ಜೊತೆಗೆ ಬ್ಯಾಂಕ್‌ಗಳಿಗೆ ವಂಚಿಸಿದ ಅಭಿಜಿತ್‌ ಗ್ರೂಪ್‌ ಗಣಿ ಕಂಪನಿಯ ಪ್ರವರ್ತಕರಾಗಿದ್ದ ಮನೋಜ್‌ ಜೈಸ್ವಾಲ್‌ ಮತ್ತು ಅಭಿಷೇಕ್‌ ಜೈಸ್ವಾಲ್‌ ಅವರನ್ನೂ ಸಿಬಿಐ ಬಂಧಿಸಿದೆ. ಮನೋಜ್‌ ಮತ್ತು ಅಭಿಷೇಕ್‌ ವಿವಿಧ ಬ್ಯಾಂಕ್‌ಗಳಿಗೆ 15000 ಕೋಟಿ ರು. ವಂಚಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.