ಕಾವೇರಿ ತೀರ್ಪಿನ ಹಿಂದೆ ನಾರಿಮನ್ ನೇತೃತ್ವದ ಸಮರ್ಥ ವಕೀಲರ ತಂಡ

First Published 17, Feb 2018, 3:49 PM IST
Cauvery Verdict Lawyer Team
Highlights

ಕರ್ನಾಟಕದ ಪರ ಅಂತರ್ ಜಲ ವಿವಾದಗಳಲ್ಲಿ ಬೆನ್ನೆಲುಬಾಗಿದ್ದವರು ದೇಶದ ಗೌರವಾನ್ವಿತ ನ್ಯಾಯವಾದಿಗಳಲ್ಲಿ ಒಬ್ಬರಾಗಿರುವ ಫಾಲಿ ನಾರಿಮನ್. ಅದರಲ್ಲೂ ಕಾವೇರಿ ವಿವಾದಕ್ಕೆ ಸಂಬಂಧಿಸಿ ಅವರು ಅನೇಕ ಬಾರಿ ಕರ್ನಾಟಕವನ್ನು ಬೀಸುವ ದೊಣ್ಣೆಯಿಂದ ಪಾರು ಮಾಡಿದ್ದರು.

ನವದೆಹಲಿ : ಕರ್ನಾಟಕದ ಪರ ಅಂತರ್ ಜಲ ವಿವಾದಗಳಲ್ಲಿ ಬೆನ್ನೆಲುಬಾಗಿದ್ದವರು ದೇಶದ ಗೌರವಾನ್ವಿತ ನ್ಯಾಯವಾದಿಗಳಲ್ಲಿ ಒಬ್ಬರಾಗಿರುವ ಫಾಲಿ ನಾರಿಮನ್. ಅದರಲ್ಲೂ ಕಾವೇರಿ ವಿವಾದಕ್ಕೆ ಸಂಬಂಧಿಸಿ ಅವರು ಅನೇಕ ಬಾರಿ ಕರ್ನಾಟಕವನ್ನು ಬೀಸುವ ದೊಣ್ಣೆಯಿಂದ ಪಾರು ಮಾಡಿದ್ದರು.

ಆದರೆ ಅಂತಿಮ ತೀರ್ಪು ಪ್ರಕಟಣೆಯ ಸಂದರ್ಭದಲ್ಲಿ ನಾರಿಮನ್ ಅವರು ನ್ಯಾಯಾಲಯದಲ್ಲಿ ಉಪಸ್ಥಿತರಿರಲಿಲ್ಲ. ಅವರು ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿದ್ದರು.  ಹಿರಿಯ ವಕೀಲ ಅನಿಲ್ ದಿವಾನ್ ಪ್ರತಿ ಸಂಘರ್ಷವನ್ನೂ ಗೆಲ್ಲಬೇಕೆಂಬ ಛಾತಿ ಹೊಂದಿದ್ದ ನ್ಯಾಯವಾದಿ. ಇವರಿಬ್ಬರೂ 80ರ ದಶಕದಿಂದಲೇ ಕರ್ನಾಟಕವನ್ನು ಪ್ರತಿನಿಧಿಸಿಕೊಂಡು ಬಂದಿದ್ದವರು.

ಆದರೆ ಅವರು ಅಂತಿಮ ವಿಚಾರಣೆಗೆ ಮೊದಲೇ ತೀರಿಕೊಂಡರು. ಅನಿಲ್ ದಿವಾನ್ ಅವರ ಸಾವಿನಿಂದ ತೆರವಾದ ಸ್ಥಾನವನ್ನು ಅವರ ಪುತ್ರ ಶ್ಯಾಮ್ ದಿವಾನ್ ಸಮರ್ಥವಾಗಿಯೇ ತುಂಬಿದರು. ಕರ್ನಾಟಕಕ್ಕೆ ಈಗ 14.5 ಟಿಎಂಸಿ ನೀರು ಸಿಕ್ಕಿದೆ ಅಂದರೆ ಅದಕ್ಕೆ ಶ್ಯಾಮ್ ದಿವಾನ್‌ರ ಸಮರ್ಥವಾದ ಕೂಡ ಕಾರಣ.

ರಾಜ್ಯದ ಕೇಸ್‌ಗಳ ಡ್ರಾಫ್ಟಿಂಗ್‌ಗಳ ಹಿಂದಿದ್ದ ಮೆದುಳು ಮೋಹನ್ ಕಾತರಕಿ ಅವರದ್ದು. ಅತೀವ ರಾಜಕೀಯ ಒತ್ತಡಗಳ ಮಧ್ಯೆಯೂ ಕಾವೇರಿ ಪ್ರಕರಣವನ್ನು ಹಿಡಿದಿಟ್ಟ ಖ್ಯಾತಿ ಅವರದ್ದು. ಜಲ ವಿವಾದಗಳಿಗೆ ಸಂಬಂಧಿಸಿದ ದೇಶದ ಮುಂಚೂಣಿ ವಕೀಲರಲ್ಲಿ ಕಾತರಕಿ ಕೂಡ ಒಬ್ಬರು. ಹಿರಿಯ ವಕೀಲ ಶರತ್ ಜವಳಿ ಅವರು 70ರ ದಶಕದಿಂದಲೂ ಗುರುತಿಸಿಕೊಂಡವರು.

ಅಡ್ವೊಕೇಟ್ ವಿ. ಎನ್. ರಘುಪತಿ ಶ್ರಮ ಕೂಡ ಇಲ್ಲಿ ಉಲ್ಲೇಖಾರ್ಹ. ವಕೀಲರಾದ ಬ್ರಿಜೇಶ್ ಕಾಳಪ್ಪ, ಅಜೀಂ ಕೆ, ಸುಭಾಷ್ ಶರ್ಮಾ, ರಣವೀರ್ ಸಿಂಗ್ ಗೆಲುವಿಗಾಗಿ ವಿಶೇಷ ಶ್ರಮ ವಹಿಸಿದ್ದರು. ಮುಖ್ಯ ಎಂಜಿನಿಯರ್ ಬಂಗಾರ ಸ್ವಾಮಿ ಮತ್ತು ಸಲಹೆಗಾರ ಶ್ರೀರಾಮಯ್ಯರು ಕೂಡ ಸ್ಮರಣೀಯರು.

loader