ಮಂಡ್ಯ (ಸೆ.11): ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಕರ್ನಾಟಕ ಬಂದ್ ಆಚರಿಸಿದ್ದಾಯಿತು. ಈಗ ತೀರ್ಪು ನೀಡಿದ ನ್ಯಾಯಾಧೀಶರ ಮೇಲೆ ದೂರನ್ನ ದಾಖಲಿಸಲಾಗಿದೆ.
10 ದಿನಗಳ ಕಾಲ ತಮಿಳುನಾಡಿಗೆ 15,000 ಕ್ಯೂಸೆಕ್ ನೀರು ಬಿಡಬೇಕು ಎಂದು ನಿರ್ದೇಶನ ನೀಡಿದ ಇಬ್ಬರು ನ್ಯಾಯಾಧೀಶರ ಮೇಲೆ ಮಂಡ್ಯದ ನಿವಾಸಿ ಎಂ.ಡಿ ರಾಜಣ್ಣ ಇಲ್ಲಿನ ಸ್ಥಳೀಯ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಜೊತೆಗೆ ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳು, ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ರವರ ಮೇಲೂ ದೂರು ದಾಖಲಿಸಿದ್ದಾರೆ.
ನ್ಯಾಯಾಲಯವು ವಿಚಾರಣೆಯನ್ನು ಸೆ.14 ರಂದು ನಡೆಸಲಿದೆ.
