ಬೆಂಗಳೂರಿನಲ್ಲಿ ಸುವಾರು 14 ಲಾರಿಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಾವೇರಿ ನದಿ ನೀರು ವಿವಾದ ಕರ್ನಾಟಕ ಮತ್ತು ತಮಿಳನಾಡಿನ ನಡುವೆ ಮತ್ತೆ ಜಗಳಕ್ಕೆ ಕಾರಣವಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಹೊರ ಬಿದ್ದ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ನಡುವೆ ಜಗಳಕ್ಕೆ ಕಾರಣವಾಗಿ. ಎರಡೂ ರಾಜ್ಯಗಳಲ್ಲಿ ಈಗಾಗಲೇ ಸಾಕಷ್ಟು ಹಿಂಸಾಚಾರಗಳು ನೆಡೆಯುತಿದ್ದು ಹಲವಾರು ವಾಹನಗಳು ಮತ್ತು ಹೋಟೆಲ್ ಗಳು ಪ್ರತಿಭಟನಾಕಾರರ ಕೆಂಗಣ್ಣಿಗೆ ಗುರಿಯಾಗಿ ಸುಟ್ಟು ಹೋಗಿವೆ.
ಕಾವೇರಿ ನೀರಿಗಾಗಿ ಹೊತ್ತಿ ಉರಿಯುತ್ತಿದೆ ರಾಜ್ಯ. ಬೆಂಗಳೂರಿನಲ್ಲಿ ಸುವಾರು 14 ಲಾರಿಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನಾಯಂಡಳ್ಳಿಯಲ್ಲಿ 5 ಲಾರಿಗಳು ಬೆಂಕಿಗಾಹುತಿಯಾಗಿವೆ. ಮೈಸೂರು ರಸ್ತೆಯಲ್ಲಿ ಕೂಡಾ 5 ಲಾರಿಗಳು ಭಸ್ಮವಾಗಿವೆ. ನೈಸ್ ರಸ್ತೆಯಲ್ಲಿ 4 ಲಾರಿಗಳು ಪ್ರತಿಭಟನಾಕಾರರ ಆಕ್ರೋಶಕ್ಕೆ ಸಿಲುಕಿ ಬೆಂಕಿಗಾಹುತಿಯಾಗಿವೆ. ಬೆಂಗಳೂರಿನ ನಾಯಂಡಳ್ಳಿ ಬಳಿ ಇನ್ನೂ ರಿಜಿಸ್ಟ್ರೇಷನ್ ಆಗಿರದ ಹೊಸ ಸ್ಕೋಡಾ ಕಾರು ದ್ವಂಸವಾಗಿದೆ.
ಬೆಂಗಳುರಿನ ಹಲವೆಡೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನೆಡೆಸುತ್ತಿದ್ದು ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಮೈಸೂರು ರಸ್ತೆ, ನಾಯಂಡಳ್ಳಿ, ಬನಶಂಕರಿ, ಹೊಸಕೆರೆಹಳ್ಳಿ, ಜಯನಗರ, ಬ್ಯಾಂಕ್ ಕಾಲೋನಿ, ಪದ್ಮನಾಭನಗರ, ಕನಕಪುರ ರಸ್ತೆ, ದಕ್ಷಿಣ ಬೆಂಗಳೂರಿನಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಕೆಲ ಬಸ್ ಗಳ ಮೇಲೆ ಕಲ್ಲು ತೂರಾಟ ಕೂಡ ನೆಡೆದಿದೆ.
