ನವದೆಹಲಿ (ಸೆ.29): ಕಾವೇರಿ ಸಂಧಾನಕ್ಕಾಗಿ ಜಲಸಂಪನ್ಮೂಲ ಸಚಿವೆ ಉಮಾಭಾರತಿ ನೇತೃತ್ವದಲ್ಲಿ ಇಂದು ಕರೆದಿದ್ದ ಸಭೆಯಲ್ಲಿ ಉಭಯ ರಾಜ್ಯಗಳ ವಾದವನ್ನು ಆಲಿಸಿದ ಉಮಾಭಾರತಿ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.

ಉಭಯ ರಾಜ್ಯಗಳ ವಾದವನ್ನು 4 ನೇ ಬಾರಿಗೆ ಅಟಾರ್ನಿ ಜನರಲ್ ಮೂಲಕ ಸುಪ್ರೀಂಕೋರ್ಟ್ ಮುಂದಿಡಲಿದ್ದೇವೆ ಎಂದು ಸಭೆ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಉಮಾಭಾರತಿ ಹೇಳಿದ್ದಾರೆ.

ಸುಪ್ರೀಂ ತೀರ್ಪಿನಿಂದ ಸಮಸ್ಯೆ ಉದ್ಭವಿಸಿದರೆ ಸಮಸ್ಯೆ ಬಗೆಹರಿಯುವವರೆಗೆ ಎರಡೂ ರಾಜ್ಯಗಳ ಗಡಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಉಮಾಭಾರತಿ ಹೇಳಿದ್ದಾರೆ.

ಸಮಸ್ಯೆ ಬಗೆಹರಿಸುವಲ್ಲಿ ಉಭಯ ರಾಜ್ಯಗಳು ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ. ನಾಳೆ ಸುಪ್ರೀಂನಲ್ಲಿ ವಿಚಾರಣೆ ನಡೆಯಲಿದ್ದು ಕರ್ನಾಟಕ ಮತ್ತು ತಮಿಳುನಾಡು ಆದೇಶವನ್ನು ಪಾಲಿಸಬೇಕು ಎಂದಿದ್ದಾರೆ.