ಈ ಮುಂಚಿನ ತೀರ್ಪಿನ ಪ್ರಕಾರ ತಮಿಳುನಾಡಿಗೆ 192 ಟಿಎಂಸಿ ನೀರನ್ನು ಕರ್ನಾಟಕಕ್ಕೆ ನಿಡಬೇಕಿತ್ತು. ಈಗ 177.56 ಟಿಎಂಸಿ ನೀರು ನೀಡಿದರೆ ಸಾಕು 

ನವದೆಹಲಿ: ಸುಪ್ರೀ ಕೋರ್ಟ್’ನ ತ್ರಿಸದಸ್ಯತ್ವ ಪೀಠ ಕಾವೇರಿ ಐತೀರ್ಪು ಪ್ರಕಟಿಸಿದ್ದು, ರಾಜ್ಯಕ್ಕೆ ತುಸು ಸಮಾಧಾನ ತಂದಿದೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ 14.5 ಟಿಎಂಸಿ ಹೆಚ್ಚುವರಿ ನೀರನ್ನು ಕರ್ನಾಟಕ ಡೆದುಕೊಳ್ಳುವ ಆದೇಶ ನೀಡಿದೆ. ಈ ತೀರ್ಪು ಮುಂದಿನ 15 ವರ್ಷಗಳವರೆಗೆ ಅನ್ವಯವಾಗಲಿದೆ.

ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯತ್ವ ಪೀಠ ತೀರ್ಪು ಪ್ರಕಟಿಸಿದ್ದು, ಈ ಅನುಸಾರ ತಮಿಳುನಾಡಿಗೆ 14.5 ಟಿಎಂಸಿ ಕಡಿತಗೊಳಿಸಿ ರಾಜ್ಯಕ್ಕೆ ನೀಡಲಾಗಿದೆ. ಈ ತೀರ್ಪು ಮುಂದಿನ 15 ವರ್ಷಗಳವರೆಗೆ ಅನ್ವಯವಾಗಲಿದೆ.

ಕಾವೇರಿ ನಿರ್ವಹಣಾ ಮಂಡಳಿ ರಚನೆ ಸದ್ಯಕ್ಕಿಲ್ಲ : ಆದೇಶ ಜಾರಿ ಅಧಿಕಾರ ಕೇಂದ್ರಕ್ಕೆ

ಕೇಂದ್ರ ಸರ್ಕಾರವೇ ಮಂಡಳಿ ರಚಿಸಬೇಕೆಂಬ ಕರ್ನಾಟಕದ ವಾದಕ್ಕೆ ಗೆಲುವು ಲಭಿಸಿದ್ದು ಮಂಡಳಿ ರಚಿಸಬೇಕೆಂಬ ನ್ಯಾಯಾಧೀಕರಣದ ಆದೇಶ ಬದಲಾಯಿಸುವುದಿಲ್. ಆದರೆ, ಕಾವೇರಿ ನಿರ್ವಹಣಾ ಮಂಡಳಿ ರಚಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ತಿಳಿಸಿದೆ.

ತೀರ್ಪಿನ ಪ್ರಮುಖ ಅಂಶಗಳು

ಸಮಾನ ಹಂಚಿಕೆ ತತ್ವಕ್ಕೆ ಪಾಲಿಸುವಂತೆ ಎರಡು ರಾಜ್ಯಗಳಿಗೆ ಸೂಚನೆ

ನೀರು ಹಂಚಿಕೆ ಕುರಿತು ಕರ್ನಾಟಕದ ವಾದಕ್ಕೆ ಮಣೆ ಹಾಗಿದ ಸುಪ್ರೀಂ ಕೋರ್ಟ್.

ಈ ಮುಂಚಿನ ತೀರ್ಪಿನ ಪ್ರಕಾರ ತಮಿಳುನಾಡಿಗೆ 192 ಟಿಎಂಸಿ ನೀರನ್ನು ಕರ್ನಾಟಕ ನೀಡಬೇಕಿತ್ತು. ಇನ್ನು 177.56 ಟಿಎಂಸಿ ನೀರು ನೀಡಿದರೆ ಸಾಕು.

ಬೆಂಗಳೂರಿನಲ್ಲಿ ಹೆಚ್ಚಿದ ಕುಡಿಯುವ ನೀರಿನ ಬೇಡಿಕೆ ಹಾಗೂ ಉದ್ಯಮಗಳಿಗೆ ಅಧಿಕ ನೀರು ಅಗತ್ಯ ಇರುವುದನ್ನು ಮನಗೊಂಡ ಸುಪ್ರೀಂ ಕೋರ್ಟ್.

2007ರಲ್ಲಿ ಕಾವೇರಿ ನೀರು ವಿವಾದ ನ್ಯಾಯಾಧೀಕರಣ ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕ್ಕೆ 270 ಟಿಎಂಸಿ ಹಾಗೂ ಕೇರಳ ಮತ್ತು ಪುದುಚೆರಿಗೆ ತಲಾ 30 ಟಿಎಂಸಿ ನೀರು ನೀಡಬೇಕೆಂದು ತೀರ್ಪು ನೀಡಿತ್ತು.

ಬೆಂಗಳೂರಿನಲ್ಲಿ ನೀರಿನ ಅಭಾವನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್. ರಾಜಧಾನಿಗೆ ಹೆಚ್ಚುವರಿ 4.75 ಟಿಎಂಸಿ ನೀರು. ತೀರ್ಪನ್ನು ಸ್ವಾಗತಿಸಿದ ರಾಜ್ಯದ ಜನತೆ ಹಾಗೂ ಸಿಎಂ

ಮುಂದಿನ 15 ವರ್ಷಗಳವರೆಗೆ ಈ ತೀರ್ಪು ಅನ್ವಯ ಎಂದ ಸುಪ್ರೀಂಕೋರ್ಟ್

ಕಾವೇರಿ ಕೊಳ್ಳದ ಅಚ್ಚುಕಟ್ಟು ಪ್ರದೇಶ ವಿಸ್ತರಣೆಗೆ ಸುಪ್ರೀಂ ಅಸ್ತು

ಬೆಂಗಳೂರಿನ ಸಮಸ್ಯೆ ನೀಗಿಸಲು 4.75.ಟಿಎಂಸಿ ನೀರು

1924ರ ಒಪ್ಪಂದ ಅಸಂವಿಧಾನಿಕ ಅಲ್ಲ ಎಂದ ಸುಪ್ರೀಂಕೋರ್ಟ್

ಎರಡು ಒಪ್ಪಂದಗಳ ಅವಧಿ ಕೇವಲ 50 ವರ್ಷ ಮಾತ್ರ, ಈಗಾಗಲೇ ಎರಡು ಒಪ್ಪಂದಗಳ ಕಾಲಾವಧಿ ಮುಗಿದಿದೆ

192 ಟಿಎಂಸಿ ನೀರು ಬಿಡುವ ಜಾಗದಲ್ಲಿ 177 ಟಿಎಂಸಿ ನೀರು ಬಿಡುಗಡೆಗೆ ಸೂಚನೆ

ತಮಿಳುನಾಡಿಗೆ 14.75 ಟಿಎಂಸಿ ನೀರು ಕಡಿತಗೊಳಿಸಿದ ಸುಪ್ರೀಂಕೋರ್ಟ್

ತಮಿಳುನಾಡಿಗೆ 177. 25 ಟಿಎಂಸಿ ನೀರು ಬಿಡುಗಡೆ

ನದಿನೀರು ಹಂಚುವಾಗ ತಮಿಳುನಾಡಿನ 20 ಟಿಎಂಸಿ ಅಂತರ್ಜಲ ನೀರನ್ನು ಪರಿಗಣಿಸಬೇಕು

ಯಾವುದೇ ಒಂದು ರಾಜ್ಯ ಸಂಪೂರ್ಣ ಹಕ್ಕು ಸಾಧಿಸುವಂತಿಲ್ಲ

1892 ಮತ್ತು 1924ರ ಒಪ್ಪಂದ ಉಲ್ಲೇಖಿಸಿದ ನ್ಯಾಯಮೂರ್ತಿ

ಸಂವಿಧಾನದಡಿಯಲ್ಲಿ ಕರ್ನಾಟಕ ಚೌಕಾಸಿ ಮಾಡಬಹುದು

ನಮಗೆ ಕೋರ್ಟ್ ತೀರ್ಪಿನ ಬಗ್ಗೆ ನಂಬಿಕೆ ಇದೆ. ಇದನ್ನು ಗೌರವಿಸುತ್ತೇವೆ. ಆದರೆ, ಇದು ರಾಜ್ಯಕ್ಕೆ ಸಾಲದು. ರಾಜ್ಯಕ್ಕೆ ನೀರಿನ ಕೊರತೆಯಾಗುವ ಬಗ್ಗೆ ಸಚಿವರೊಂದಿಗೆ ಚರ್ಚಿಸುತ್ತೇವೆ.
-ನವನೀತ್ ಕೃಷ್ಣನ್, ತಮಿಳು ನಾಡು ಪರ ವಕೀಲ

ತಮಿಳುನಾಡಿಗೆ ನೀರನ್ನು ಕಡಿಮೆ ಮಾಡಿರುವುದು ನಿರಾಶೆಯಾಗಿದೆ. ಇದರಿಂದ ರಾಜ್ಯಕ್ಕೆ ನೀರು ಹಂಚಿಕೆ ಕಡಿಮೆಯಾಗಲಿದ್ದು, ರೈತರ ಮೇಲೆ ದುಷ್ಪರಿಣಾಮ ಬೀರಲಿದೆ.
- ಶರವಣನ್, ಡಿಎಂಕೆ ವಕ್ತಾರ

ಅಬ್ಬಾ, 30 ವರ್ಷಗಳ ನಂತರ ಕೋರ್ಟ್ ಕರ್ನಾಟಕ ಪರ ತೀರ್ಪು ನೀಡಿದ್ದು, ರಾಜ್ಯ ತುಸು ನಿರಾಳವಾಗಿದೆ.
- ಮಾಳವಿಕಾ ಅವಿನಾಶ್, ಬಿಜೆಪಿ ವಕ್ತಾರೆ