ಬೆಂಗಳೂರು(ಸೆ.13): ಕಾವೇರಿನದಿನೀರಿಗಾಗಿಕರ್ನಾಟಕಹಾಗೂತಮಿಳುನಾಡುರಾಜ್ಯಗಳನಡುವೆತೀವ್ರಹೋರಾಟನಡೆಯುತ್ತಿದ್ದರೆ, ಅತ್ತಕಾವೇರಿನದಿಯಉಗಮಸ್ಥಳಕೊಡಗುಜಿಲ್ಲೆಯಲ್ಲಿಹಿಂದೆಂದೂಕಾಣದಂಥಭೀಕರಬರದಛಾಯೆಆವರಿಸಿದೆ.

ಇತಿಹಾಸದಲ್ಲಿಇದೇಮೊದಲಬಾರಿಗೆಜಿಲ್ಲೆಯಎಲ್ಲಮೂರೂತಾಲೂಕುಗಳಲ್ಲಿಅತಿಕಡಿಮೆಮಳೆಉಂಟಾಗಿದ್ದು, ಪರಿಸ್ಥಿತಿಹೀಗೆಮುಂದುವರಿದರೆಶೀಘ್ರಇಡೀಜಿಲ್ಲೆಬರಗಾಲಪೀಡಿತಜಿಲ್ಲೆಯಾಗಿಘೋಷಣೆಯಾಗಲಿದೆ. ಕಳೆದಜೂನ್‌ 1ರಿಂದಸೆಪ್ಟೆಂಬರ್‌ 12ನಡುವೆಕೇವಲ 1449.72 ಮಿಲಿಮೀಟರ್ಮಳೆಬಿದ್ದಿದೆ. ಆದರೆವಾಸ್ತವವಾಗಿ 2219.20 ಮಿಮೀಮಳೆಬೀಳಬೇಕಾಗಿತ್ತು. ಸದ್ಯದಲೆಕ್ಕಾಚಾರದಪ್ರಕಾರ, ಜಿಲ್ಲೆಯಲ್ಲಿಶೇ.35ರಿಂದಶೇ.48ರಷ್ಟುಕಡಿಮೆಮಳೆದಾಖಲಾಗಿದೆ.

ಜಲಸಂಪನ್ಮೂಲಇಲಾಖೆಯಪ್ರಕಾರ, ಕಾವೇರಿನದಿನೀರಿನಒಟ್ಟು 790 ಟಿಎಂಸಿನೀರಿನಲ್ಲಿಕೊಡುಗೆಜಿಲ್ಲೆಯಿಂದ 400 ಟಿಎಂಸಿನೀರುಸಂಗ್ರಹವಾಗುತ್ತದೆ. ಆದಾಗ್ಯೂಕಾವೇರಿನದಿನೀರಿಗಾಗಿಎರಡುರಾಜ್ಯಗಳಲ್ಲಿಕದನವೇನಡೆದರೂನದಿಯಉಗಮಸ್ಥಳದಲ್ಲಿಯಾವುದೇರೀತಿಯಅಪಸ್ವರಕೇಳಿಬಂದಿಲ್ಲ. ಏಕೆಂದರೆಕಾವೇರಿನದಿಯಿಂದಜಿಲ್ಲೆಯಸೋಮವಾರಪೇಟೆತಾಲೂಕಿನಅಲ್ಪಭಾಗಕ್ಕೆಮಾತ್ರನೀರಾವರಿಸೌಲಭ್ಯವಿದೆ. ಉಳಿದಂತೆದೀಪದಬುಡದಲ್ಲೇಕತ್ತಲುಎಂಬಂತೆನದಿಯನೀರಿನಿಂದಜಿಲ್ಲೆಯಜನರಿಗೆಹೆಚ್ಚುಲಾಭವಿಲ್ಲಎನ್ನುತ್ತಾರೆಸ್ಥಳೀಯರು.

ಕನ್ನಡಪ್ರಭವಾರ್ತೆ