ಪ್ಲಾಟ್'ಫಾರ್ಮ್'ನಲ್ಲಿ ನಿಂತಿದ್ದಾತನ ಕೈಬೆರಳುಗಳು ಸಿಲುಕಿದ ಮರುಕ್ಷಣವೇ ರೈಲು ಹೊರಟುಹೋಗಿದೆ. ಇತ್ತ ಕೈಬೆರಳು ಸಿಲುಕಿಕೊಂಡು ಕೈಬಿಡಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದಾತನನ್ನೂ ರೈಲು ತನ್ನ ವೇಗದಲ್ಲೇ ಕೊಂಡೊಯ್ದಿದೆ. ಇಂತಹುದ್ದೊಂದು ಭಯಾನಕ ಘಟನೆ ಚೀನಾದಲ್ಲಿ ನಡೆದದ್ದು ಕೈ ಸಿಲುಕಿದ ವ್ಯಕ್ತಿ ರೈಲಿನೊಳಗಿರದೆ, ಹೊರಗಡೆಯೇ ಇದ್ದ ಎಂಬುವುದು ಗಮನಿಸಲೇಬೇಕಾದ ವಿಚಾರ. ಇನ್ನು ಈ ಯುವಕನ ಸ್ಥಿತಿ ಕಂಡು ನಿಲ್ದಾಣದಲ್ಲಿ ನಿಂತಿದ್ದ ಇತರರು ರೈಲು ನಿಲ್ಲಿಸಲು ಯತ್ನಿಸಿದರಾದರೂ, ಅವರ ಪ್ರಯತ್ನ ವಿಫಲವಾಗಿದೆ.
ಬೀಜಿಂಗ್(ಮೇ.17): ಪ್ಲಾಟ್'ಫಾರ್ಮ್'ನಲ್ಲಿ ನಿಂತಿದ್ದಾತನ ಕೈಬೆರಳುಗಳು ಸಿಲುಕಿದ ಮರುಕ್ಷಣವೇ ರೈಲು ಹೊರಟುಹೋಗಿದೆ. ಇತ್ತ ಕೈಬೆರಳು ಸಿಲುಕಿಕೊಂಡು ಕೈಬಿಡಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದಾತನನ್ನೂ ರೈಲು ತನ್ನ ವೇಗದಲ್ಲೇ ಕೊಂಡೊಯ್ದಿದೆ. ಇಂತಹುದ್ದೊಂದು ಭಯಾನಕ ಘಟನೆ ಚೀನಾದಲ್ಲಿ ನಡೆದದ್ದು ಕೈ ಸಿಲುಕಿದ ವ್ಯಕ್ತಿ ರೈಲಿನೊಳಗಿರದೆ, ಹೊರಗಡೆಯೇ ಇದ್ದ ಎಂಬುವುದು ಗಮನಿಸಲೇಬೇಕಾದ ವಿಚಾರ. ಇನ್ನು ಈ ಯುವಕನ ಸ್ಥಿತಿ ಕಂಡು ನಿಲ್ದಾಣದಲ್ಲಿ ನಿಂತಿದ್ದ ಇತರರು ರೈಲು ನಿಲ್ಲಿಸಲು ಯತ್ನಿಸಿದರಾದರೂ, ಅವರ ಪ್ರಯತ್ನ ವಿಫಲವಾಗಿದೆ.
ಇನ್ನು ಈ ಕುರಿತಾಗಿ ಮಾತನಾಡಿರುವ ರೈಲ್ವೇ ಸಿಬ್ಬಂದಿ 'ಕೈಬೆರಳು ಸಿಲುಕಿಕೊಂಡ ಯುವಕ ತಪ್ಪಿ ಆ ರೈಲು ಹತ್ತಿದ್ದ, ಇದು ತಿಳಿಯುತ್ತಿದ್ದಂತೆ ಆತುರತಾತುರವಾಗಿ ರೈಲಿನಿಂದ ಇಳಿಯುತ್ತಿದ್ದ ಇದೇ ವೇಳೆ ಈ ದುರಂತ ನಡೆದಿದೆ ಎಂದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಹಲವಾರು ಮಂದಿ ವೀಕ್ಷಕರು ಇಂತಹ ಘಟನೆಗಳು ನಡೆಯುವಾಗ, ಅವುಗಳನ್ನು ತಡೆಯುವ ತಂತ್ರಜ್ಞಾನವನ್ನು ಅಳವಡಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
