ಬೆಕ್ಕು ಕಚ್ಚಿ ಇಬ್ಬರ ಸಾವು

First Published 29, Mar 2018, 1:41 PM IST
Cat Bite Death In Dharwad
Highlights

ಬೆಕ್ಕು ಕಚ್ಚಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ನೀರಲಕಟ್ಟಿ ಗ್ರಾಮದಲ್ಲಿ ನಡೆದಿದೆ.

ಧಾರವಾಡ :  ಬೆಕ್ಕು ಕಚ್ಚಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ನೀರಲಕಟ್ಟಿ ಗ್ರಾಮದಲ್ಲಿ ನಡೆದಿದೆ.

ಗಿರಿಜವ್ವ ಗಂಟಿ (60) ಮಲ್ಲೇಶಪ್ಪ ಮಟಗಿ ( 70)  ಮೃತ ದುರ್ದೈವಿಗಳಾಗಿದ್ದಾರೆ. ರೇಬಿಸ್ ರೋಗದಿಂದ ನೀರಲಕಟ್ಟೆ ಗ್ರಾಮಸ್ಥರಲ್ಲಿ  ಆತಂಕ ಎದುರಾಗಿದ್ದು, ಇದೀಗ  ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಫೆಬ್ರವರಿ 3ನೇ ತಾರೀಕು  ಹುಚ್ಚು ಬೆಕ್ಕು ಕಚ್ಚಿ ಇಬ್ಬರು ಗಾಯಗೊಂಡಿದ್ದರು. ಆದರೆ  ಚುಚ್ಚು ಮದ್ದು ತೆಗೆದುಕೊಳ್ಳಲು ನಿರ್ಲಕ್ಷಿಸಿದ ಕಾರಣ ಸಾವು ಸಂಭವಿಸಿದೆ.

ಈಗ ಕುಟುಂಬಸ್ಥರಿಗೆಲ್ಲಾ ವೈದ್ಯಾಧಿಕಾರಿಗಳು  ಚುಚ್ಚು ಮದ್ದು ನೀಡಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

loader