ಬೆಂಗಳೂರು (ಏ. 25): ಇತ್ತೀಚಿನ ದಿನಗಳಲ್ಲಿ ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಿದ್ದಾರೆ. ಸ್ಯಾಂಡಲ್’ವುಡ್’ನ ನಟಿಯೊಬ್ಬಲು ತನಗೂ ಕಾಸ್ಟಿಂಗ್ ಕೌಚ್ ಆಗಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.  
 
ನನಗೂ ಬಾಲಿವುಡ್’ನಲ್ಲಿ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ. ಬಾಲಿವುಡ್​ನಲ್ಲಿ ನಾನು ಎರಡು ದೊಡ್ಡ ಸಿನಿಮಾಗಳನ್ನು ಮಾಡಬೇಕಿತ್ತು. ಆದರೆ  ಕಾಸ್ಟಿಂಗ್ ಕೌಚ್ ಕಾರಣದಿಂದಾಗಿ ಬಾಲಿವುಡ್ ಸಿನಿಮಾ ಬಿಟ್ಟು ಹೊರ ಬಂದಿದ್ದೇನೆ. ಕನ್ನಡ, ತಮಿಳು, ಮಲಯಾಳಂನಲ್ಲಿ ಇಂಥ ಅನುಭವ ಆಗಿಲ್ಲ. ಬಾಲಿವುಡ್’ನಲ್ಲಿ ಆಗಿತ್ತು. ಹಾಗಾಗಿ ಬಿಗ್ ಆಫರ್’ಗಳನ್ನು ಕೈ ಬಿಟ್ಟೆ ಎಂದಿದ್ದಾರೆ ಎಂದು ನಟಿ ಹರ್ಷಿಕಾ ಪೂಣಚ್ಚ ಚಿಟ್ಟೆ ಸಿನಿಮಾದ ಸಾಂಗ್ ಲಾಂಚ್ ವೇಳೆ ಹೇಳಿದ್ದಾರೆ.