ಅಳ್ವರ್‌ (ರಾಜಸ್ಥಾನ): ‘ನನಗೆ ಜಾತಿ ಅಭಿವೃದ್ಧಿ ಮುಖ್ಯ. ಸಮಾಜ ಆನಂತರ’ ಎಂದು ರಾಜಸ್ಥಾನದ ನೂತನ ಕಾಂಗ್ರೆಸ್‌ ಸರ್ಕಾರದ ಸಚಿವೆ ಮಮತಾ ಭೂಪೇಶ್‌ ವಿವಾದಿತ ಹೇಳಿಕೆ ನೀಡಿದ್ದಾರೆ.

ಸೋಮವಾರ ಅಳ್ವರ್‌ ಜಿಲ್ಲೆಯ ರೇಣಿ ಎಂಬ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮಮತಾ ಅವರು, ‘ನನ್ನ ಮೊದಲ ಕರ್ತವ್ಯವೆಂದರೆ ನನ್ನ ಜಾತಿಯ ಜನರ ಅಭಿವೃದ್ಧಿ. ಬಳಿಕ ದೊಡ್ಡ ಸಮಾಜದ ಪರ ಕೆಲಸ ಮಾಡುವೆ. ಎಲ್ಲರಿಗಾಗಿ ಕೆಲಸ ಮಾಡುವುದು ನನ್ನ ಉದ್ದೇಶ’ ಎಂದರು.

ಮಮತಾ ಹೇಳಿಕೆಗೆ ಪ್ರತಿಪಕ್ಷ ಬಿಜೆಪಿ ತೀವ್ರ ಕಿಡಿಕಾರಿದೆ.