Asianet Suvarna News Asianet Suvarna News

ಜಾತಿ ಹುಟ್ಟಿನಿಂದಲೇ ನಿರ್ಧಾರವಾಗುತ್ತದೆ; ವಿವಾಹದ ಬಳಿಕ ಅದು ಬದಲಾಗುವುದಿಲ್ಲ: ಸುಪ್ರೀಂಕೋರ್ಟ್

ವ್ಯಕ್ತಿಯೊಬ್ಬನ ಜಾತಿ ಹುಟ್ಟಿನಿಂದಲೇ ನಿರ್ಧಾರವಾಗುತ್ತದೆ. ವಿವಾಹದ ಬಳಿಕ ಅದು ಬದಲಾಗುವುದಿಲ್ಲ ಎಂದು ಸುಪ್ರೀಕೋರ್ಟ್ ಮಹತ್ವದ ತೀರ್ಪು ನೀಡಿದೆ.

Caste decided by birth  cannot be changed by marriage says  Supreme Court

ನವದೆಹಲಿ( ಜ.21): ವ್ಯಕ್ತಿಯೊಬ್ಬನ ಜಾತಿ ಹುಟ್ಟಿನಿಂದಲೇ ನಿರ್ಧಾರವಾಗುತ್ತದೆ. ವಿವಾಹದ ಬಳಿಕ ಅದು ಬದಲಾಗುವುದಿಲ್ಲ ಎಂದು ಸುಪ್ರೀಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಎಂಬ ಆಧಾರದ ಮೇಲೆ 21 ವರ್ಷಗಳ ಹಿಂದೆ ಮೀಸಲಾತಿಯ ಪ್ರಯೋಜನ ಪಡೆದುಕೊಂಡಿದ್ದ ಕೇಂದ್ರೀಯ ವಿದ್ಯಾಲಯದ ಮಹಿಳಾ ಶಿಕ್ಷಕಿಯೊಬ್ಬಳ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

20 ವರ್ಷ ಸೇವೆ ಸಲ್ಲಿಸಿ ಈಗ ಉಪ ಪ್ರಾಧ್ಯಾಪಕಿಯಾದ ಶಿಕ್ಷಕಿ ಮೇಲ್ಜಾತಿಯಲ್ಲಿ ಜನಿಸಿದವಳಾಗಿದ್ದು, ಮೀಸಲಾತಿ ಪಡೆಯಲು ಅರ್ಹತೆ ಹೊಂದಿಲ್ಲ. ಪರಿಶಿಷ್ಟ ಜನಾಂಗದ ವ್ಯಕ್ತಿಯನ್ನು ಮದುವೆಯಾದ ಮಾತ್ರಕ್ಕೆ ಆಕೆಯ ಜಾತಿ ಬದಲಾಗುವುದಿಲ್ಲ ಎಂದು ನ್ಯಾ. ಅರುಣ್ ಮಿಶ್ರಾ ಮತ್ತು ಎಂ.ಎಂ. ಶಾಂತನಗೌಡರ್ ಅವರಿದ್ದ ಪೀಠ ತಿಳಿಸಿದೆ.

ಶಿಕ್ಷಕಿ ಪರಿಶಿಷ್ಟ ಜನಾಂಗಕ್ಕೆ ಸೇರಿದವಳಾಗಿದ್ದಾಳೆ ಎಂದು ಬಲಂದ್‌ಶಹರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು 1991 ರಲ್ಲಿ ಜಾತಿ ಪ್ರಮಾಣಪತ್ರ ನೀಡಿದ್ದರು. ಶೈಕ್ಷಣಿಕ ಅರ್ಹತೆ ಮತ್ತು ಜಾತಿ ಪ್ರಮಾಣ ಪತ್ರಹೊಂದಿರುವ ಕಾರಣಕ್ಕೆ ಆಕೆಯನ್ನು 1993 ರಲ್ಲಿ ಪಂಜಾಬ್‌ನ ಪಠಾಣ್‌ಕೋಟ್‌ನ ಕೇಂದ್ರೀಯ  ವಿದ್ಯಾಲಯದ ಸ್ನಾತಕೋತ್ತರ ಶಿಕ್ಷಕಿಯನ್ನಾಗಿ ನೇಮಿಸಲಾಗಿತ್ತು. ಆದರೆ, ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಶಿಕ್ಷಕಿಯ ನೇಮಕವನ್ನು ರದ್ದುಪಡಿಸುವಂತೆ ಕೋರಿ ಎರಡು ದಶಕಗಳ ಬಳಿಕ ದೂರು ದಾಖಲಾಗಿತ್ತು.

 

Follow Us:
Download App:
  • android
  • ios