ಉತ್ತರ ಪ್ರದೇಶ ಸಂಸದೆ ಸಾವಿತ್ರಿ ಬಾಯಿ ಫುಲೆ ಹನುಮಂತ ಮನುವಾದಿಗಳ ಗುಲಾಮ, ಅವನೊಬ್ಬ ದಲಿತ ಎಂದು ಹೇಳಿದ್ದಲ್ಲದೇ, ಪಕ್ಷದಿಂದ ದೂರ ಸರಿದಿದ್ದಾರೆ. ಈ ಬೆನ್ನಲ್ಲೇ ಹನುಮಂತ ಜಾತಿ ವಿಚಾರವಾಗಿ ವಾದ ವಿವಾದಗಳು ನಡೆಯುತ್ತಿದ್ದು, ಅವನಿಗೊಂದು ಜಾತಿ ಪ್ರಮಾಮ ಪತ್ರ ನೀಡಬೇಕೆಂದು ಆಗ್ರಹಿಸಲಾಗುತ್ತಿದೆ.

ವಾರಣಾಸಿ: ರಾಮಭಕ್ತ ಹನುಮಂತನಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಕೋರಿ ಮುಲಾಯಂ ಸಿಂಗ್‌ ಸಹೋದರ ಶಿವಪಾಲ್‌ ಯಾದವ್‌ ನೇತೃತ್ವದ ಪ್ರಗತಿಶೀಲ ಸಮಾಜವಾದಿ ಪಕ್ಷವು, ಉತ್ತರ ಪ್ರದೇಶದ ಜಿಲ್ಲಾಡಳಿತಕ್ಕೆ ಮೊರೆ ಇಟ್ಟಿದೆ. 1 ವಾರದೊಳಗೆ ಪ್ರಮಾಣಪತ್ರ ನೀಡದಿದ್ದರೆ, ಪ್ರತಿಭಟನೆಗೆ ನಡೆಸುವುದಾಗಿ ಬೆದರಿಕೆ ಹಾಕಿದೆ.

Add Asianetnews Kannada as a Preferred SourcegooglePreferred

ಜಾತಿ ಪ್ರಮಾಣಕ್ಕೆ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಲಾಗಿದ್ದು, ಮಹಾರಾಜ ಕೇಸರಿ ಹಾಗೂ ಅಂಜನಾದೇವಿ ಅವರು ಕ್ರಮವಾಗಿ ಆಂಜನೇಯನ ತಂದೆ ಮತ್ತು ತಾಯಿ ಎಂದು ದಾಖಲೆಯಲ್ಲಿ ಹೇಳಲಾಗಿದೆ.

ಆಂಜನೇಯ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್

ಇತ್ತೀಚೆಗಷ್ಟೇ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆಂಜನೇಯ ದಲಿತ ಎಂದು ಹೇಳಿದ್ದರು ಎಂದು ವರದಿಯಾಗಿತ್ತು. ಅಲ್ಲದೆ, ಬಿಜೆಪಿ ಸಂಸದೆ ಹಾಗೂ ಇದೀಗ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಸಾವಿತ್ರಿ ಬಾಯಿಫುಲೆ ಅವರು ಸಹ ಹನುಮಂತ ದಲಿತನಾಗಿದ್ದು, ಮನುವಾದಿ ಜನರ ಗುಲಾಮನಾಗಿದ್ದ ಎಂದಿದ್ದರು.

ಮಂಗಳಾರತಿ ವೇಳೆ ಪವಾಡ: ಹೊಳೆ ಆಂಜನೇಯನ ದರ್ಶನ