ಕಾರನ್ನು ಹಿಂದಕ್ಕೆ ಪಡೆಯಲು ಒಪ್ಪಿರುವ, ಕಾರು ಉಡುಗೊರೆಯಾಗಿ ನೀಡಿದ್ದ ಹೈದ್ರಾಬಾದ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ, ವಿ. ಚಾಮುಂಡೇಶ್ವರನಾಥ್, ಕಾರಿನ ಬದಲು ಹಣ ನೀಡುವುದಾಗಿ ಘೋಷಿಸಿದ್ದಾರೆ

ನವದೆಹಲಿ (ಅ.14): ರಿಯೋ ಒಲಿಂಪಿಕ್ಸ್​ನ ಜಿಮ್ನಾಸ್ಟಿಕ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಕ್ಕಾಗಿ ಉಡುಗೊರೆಯಾಗಿ ದೊರೆತಿದ್ದ ಐಷಾರಾಮಿ BMW ಕಾರನ್ನು ದೀಪಾ ಕರ್ಮಾಕರ್ ಹಿಂದಿರುಗಿಸಲು ನಿರ್ಧರಿಸಿದ್ದಾರೆ.

ಇದೇ ವೇಳೆ ಕಾರನ್ನು ಹಿಂದಕ್ಕೆ ಪಡೆಯಲು ಒಪ್ಪಿರುವ, ಕಾರು ಉಡುಗೊರೆಯಾಗಿ ನೀಡಿದ್ದ ಹೈದ್ರಾಬಾದ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ, ವಿ. ಚಾಮುಂಡೇಶ್ವರನಾಥ್, ಕಾರಿನ ಬದಲು ಹಣ ನೀಡುವುದಾಗಿ ಘೋಷಿಸಿದ್ದಾರೆ.

ಅಗರ್ತಲಾದಂತಹ ಸಣ್ಣ ನಗರದಲ್ಲಿ ಐಷಾರಾಮಿ BMW ಕಾರಿನ ನಿರ್ವಹಣೆ ಕಷ್ಟವಾಗುತ್ತಿದೆ ಎಂಬ ಕಾರಣದಿಂದ ದೀಪಾ ಕಾರನ್ನು ಹಿಂದಿರುಗಿಸಲು ನಿರ್ಧರಿಸಿದ್ದರು.